ಹೆಚ್ಚಿನ ಮಾಹಿತಿಗೆ ಇಲ್ಲಿ ಒತ್ತಿ
Putta 1

ಪುಟ್ಟನ ಬಿಂಗುರ್ಟಿ -29

ಇರುಳು ಒರಕ್ಕಿಲ್ಲಿ ಮಳೆ ಬಂದರೆ… ಜುಲೈ ಎರಡು. ಮಳೆಯೋ ಮಳೆ. ಜಡಿಗುಟ್ಟಿ ಮಳೆ. ಶಾಲಗೆ ರಜೆ ಹೇದು ಮುನ್ನಾಣದಿನಾವೇ ಗೊಂತಾಯಿದು. ಚೆಕ್ಕೆಮಾವಂಗೆ ಬಿಡಿ, ಪುಟ್ಟಂಗೂ ಚಳಿ ಹಿಡುದಿತ್ತು. ಪುಟ್ಟ ಎದ್ದದು ಒಂಬತ್ತು ಗಂಟಗೆ ಅಂತೂ ಇಂತೂ ಮಳೆ ಭಜನೆಲಿಯೇ ಇಡೀ ದಿನ ಕಳಾತು. ಇರುಳಾತು, ಊಟಾತು. ಮಳೆ ಬಿಟ್ಟಿದಿಲ್ಲೆ ಪುಟ್ಟ° ತಲೆ ಹತ್ರಂಗೆ ಕೊಡೆ ಬಿಡಿಸಿಮಡಿಕ್ಕೊಂಡು ಹೊದಕ್ಕೆ ಎರಡು ಎಳಕ್ಕೊಂಡ° ಇದೆಂಸಕೋ ಕೊಡೆ ಒರಗುವಾಗ – ಕೇಟವು ಚೆಕ್ಕೆ ಮಾವ° ಪುಟ್ಟ° ಹೇದ° – ಎಲ್ಯಾರು ನಿನ್ನಾಣಾಂಗೆ ಒರಕ್ಕಿಲ್ಲಿ ಮಳೆ ಬಂದರೆ ಆನೆಂತ ಮಾಡ್ಸು!. ನಿಂಗಳತ್ತರೆ ರೈನು ಕೋಟು ಇದ್ದು. ಆನು ಯಾವ ಬಸ್ಟೇಂಡಿಂಗೆ ಓಡ್ಸು!!

Shankari Akka Vector

ಶಂಕರಿ ಅಕ್ಕನ ಟಿಪ್ಸ್-19

ಕುಂಡಿಗೆ ಹಸಿ ಪಚ್ಚೆಡಿ ನಾವೆಲ್ಲ ಕುಂಡಿಗೆ ಪಚ್ಚೆಡಿ ಮಾಡುದು ಎಲ್ಲರಿಗೂ ಗೊಂತಿಕ್ಕು. ಎಲ್ಲರೂ ಕುಂಡಿಗೆ ಕೊರದು ಬೇಯಿಸಿ ಮಾಡುದು. ಆದರೆ ಆನು ಹಸಿ ಕುಂಡಿಗೆಯ ಪಚ್ಚೆಡಿ ಮಾಡುದು ಹೇಂಗೇಳಿ ಹೇಳುತ್ತೆ. ಕುಂಡಿಗೆ ಪಚ್ಚೆಡಿಗೆ ಕದಳಿ ಬಾಳೆದಾದರೆ ಚಟ್ನಿ ಕೆಂಪಾವುತ್ತು, ಬೇರೆದು ಅಷ್ಟು ಕೆಂಪಾವುತ್ತಿಲ್ಲೆ, ರುಚಿದೆ ಕಮ್ಮಿ. ತೋಟಲ್ಲಿ ಅದೇ ದಿನ ಬಿದ್ದ ಕುಂಡಿಗೆ ಹಾಳೆದೆ ಆವುತ್ತು. ನವಗೆ ಬೇಕಾದಷ್ಟು ಕುಂಡಿಗೆಹಾಳೆ ಮತ್ತೆ ಹುಳಿ ಉಪ್ಪು, ಗಾಂಧಾರಿ ಮೆಣಸು ರಜ ಕಾಯಿಸುಳಿ ಹಾಕಿ ನೊಂಪಿಂಗೆ ಕಡದು, ಬೇಕಾರೆ ಬೆಳ್ಳುಳ್ಳಿ ಹಾಕಿ ಒಂದು ಒಗ್ಗರಣೆ ಕೊಟ್ಟರೆ ಕುಂಡೀಗೆ ಹಸಿ ಚಟ್ನಿ ರೆಡಿ. ಬೇಯಿಸಿ ಮಾಡಿದ ಚಟ್ನಿಂದ ರುಚಿ ಇದಕ್ಕೆ ಹೆಚ್ಚು. ಮರದಿನಕ್ಕೆ ಮಡುಗುಲಾವುತ್ತಿಲ್ಲೆ. ಎಂಗೊ ಸಣ್ಣಾದಿಪ್ಪಗ ಶಾಲೆಯ ಊಟಕ್ಕೆ ಇದನ್ನೇ ಮಾಡಿಕೊಂಡೋಗಿದ್ದದು *** ಒರಳೆಗೆ ಉಪದ್ರಕ್ಕೆ ಮದ್ದು ಮನೆಯ ಮಾಡಿನ ಮರಕ್ಕೆ ಒರಳೆ ಬಂದರೆ, ಹಿಟ್ ಸ್ಪ್ರೇಯ ಲಾಯಕಕ್ಕೆ ಸ್ಪ್ರೇ ಮಾಡಿರೆ ಒಂದು ವರ್ಷಕ್ಕೆ ಒರಳೆ ಉಪದ್ರ ಇಲ್ಲೆ. ಇದು ಎಂಗೊ ಪ್ರಯೋಗ ಮಾಡಿ ನೋಡಿದ್ದೆಯೊ˚.

Skink

ಅರಣೆ ಮರೆವು

ಮನೆಲ್ಲಿ ಎಂತದೋ ಒಂದು ಸಾಮಾನು ಖಾಲಿ ಆಯಿದು, ಅಗತ್ಯವಾಗಿ ಈಗಳೇ ಬೇಕು ಹೇಳಿ ಅದರ ತೆಕ್ಕೊಂಡು ಬಪ್ಪಲೆ ಅಂಗಡಿಗೆ ಹೋದಪ್ಪಗ, ಅಲ್ಲಿ ಆಚದು – ಈಚದು ಹೇಳಿ ಸುಮಾರು ಸಾಮಾನುಗೋ ಕಣ್ಣಿಂಗೆ ಕಂಡಪ್ಪಗ ಇದಿರಲಿ ಅದಿರಲಿ ಹೇಳಿ ತೆಕ್ಕೊಂಡು, ಅಗತ್ಯವಾಗಿ ಬೇಕು ಹೇಳಿ ಹೋದ ಸಾಮಾನಿನ ತೆಗೆಯದ್ದೆ ಬಪ್ಪದು, ಹಾಂಗೆಯೇ ಅಡಿಗೆ ಮಾಡಿಗೊಂಡು ಇಪ್ಪಗ ತಂಪು ಪೆಟ್ಟಿಗೆಂದ ಎಂತೋ ತೆಗೆಯೇಕ್ಕು ಹೇಳಿ ಹೋಗಿ ಅದರ ಬಾಗಿಲು ತೆಗದಪ್ಪಗ ಎಂತ ತೆಗವಲೆ ಹೋದ್ದು ಹೇಳಿಯೇ ನೆಂಪು ಅಪ್ಪಲಿಲ್ಲೆ, ಇದೆಲ್ಲ ಈ ಅರಣೆ ಮರೆವಿಂಗೆ ಉದಾಹರಣೆಗೋ. ಅರಣೆ ಹೇಳಿರೆ ನಿಂಗೊಗೆಲ್ಲ ಗೊಂತಿಕ್ಕು ಅಲ್ಲದಾ? ಕನ್ನಡಲ್ಲಿ ಇದಕ್ಕೆ ಹಾವು ರಾಣಿ ಹೇಳ್ತವಡ. ಈ ಅರಣೆ ನಮ್ಮ ಕಚ್ಚುಲೆ ಹೇಳಿ ತುಂಬಾ ಬೇಗ ಬೇಗ ಹರಕ್ಕೊಂಡು ಬಂದು ನಮ್ಮ ಹತ್ರೆ ಎತ್ತುವಗ ಎಂತಕೆ ಬಂದದು ಹೇಳಿಯೇ ಅದಕ್ಕೆ ಮರತ್ತು ಹೋಗಿ ವಾಪಾಸು ಹೋವುತ್ತು. ಇದು ಸತ್ಯವುದೇ, ಆನು ಕಣ್ಣಾರೆ ಕಂಡಿದೆ, ಆನು ಸಣ್ಣ ಇದ್ದಿಪ್ಪಗ ಅಪ್ಪನ ಮನೇಲಿ ಒಂದು ಕೋಣೆಗೆ ಈ ಅರಣೆ ಓಡಿ ಓಡಿ ಬಕ್ಕು, ನಮ್ಮ ಎಂತು ಮಾಡ ವಾಪಾಸು ಅದರಷ್ಟಕೆ ಹೋಕು. ನಾವುದೇ ಅದರ ಹಾಂಗೆ ಕೆಲವು ಸರ್ತಿ ಮರೆತ್ತ ಕಾರಣ ಅದಕ್ಕೆ ಅರಣೆ ಮರೆವು ಹೇಳಿ ಹೆಸರು ಬಂದದು ಆದಿಕ್ಕು ಉಮ್ಮಪ್ಪ ಎಂತದೋ ನವಗೆ ಗೊಂತಿಲ್ಲೆ. ಈ ಅರಣೆ ಹಾಂಗೆಯೇ ನುಸಿ, ಎರುಗುಗೊಕ್ಕು ಮರೆತಿತ್ತರೆ ಲಾಯಕ ಇರ್ತಿತ್ತು ಅಲ್ಲದಾ, ಎಷ್ಟು ದೊಡ್ಡ ಮನೆ ಇದ್ದರು ಅದಲ್ಲಿ ಸಕಲ ವ್ಯವಸ್ಥೆ ಇದ್ದರೂ ಈ ನುಸಿಗೊ ಕಚ್ಚಿ ಕಚ್ಚಿ ನವಗೆ ನೇರ್ಪಕೆ ಒರಗುಲೂ ಬಿಡ್ತಿಲ್ಲೆ, ಹಾಂಗಾಗಿ ಈ ನುಸಿಗೊಕ್ಕೂ ಅರಣೆ ಮರೆವು ಕೊಡಿ ಹೇಳಿ ದೇವರ ಹತ್ರೆ ಪ್ರಾರ್ಥನೆ ಮಾಡುವ ಆಗದ ಎಂತ ಹೇಳ್ತಿ 😄

ಗಂಗಕ್ಕ

ಗಾದೆಮಾತಿನ ಗಂಗಕ್ಕಾ

ಹಳೇ ಕಾಲದ ದೊಡ್ಡ ಮನೆ. ಎದುರಿಗೆ ಕಟಾಂಜನ. ಮುಂಬಾಗಿಲಿಗೆ ಚೆಂದದ ಬಾಗಿಲತೋರಣ. ಅಂಗಳದಲ್ಲೊಂದು ಜೋಕಾಲಿ. ಅದರ ಬದಿಗೇ ಒಂದು ಖುರ್ಚಿ. ಆ ಖುರ್ಚಿಗೆ ನಂಗ್ಳ ಗಂಗಕ್ಕನೇ ಅಲಂಕಾರ. ಮನೆಗೆ ಯಾರೇ ಬರ್ಲಿ, ಯಾರೇ ಹೋಗ್ಲಿ… ಗಂಗಕ್ಕನ ಈ ಜಾಗ ಮಾತ್ರ ಬದ್ಲಾಜೇ ಇಲ್ಲೆ. ಎಲ್ಲದ್ರಲ್ಲೂ ಭಾರೀ ಶಿಸ್ತು. ಗಂಗಕ್ಕನ ಗಂಡಾ ಗಂಗಾಧರಣ್ಣಾ. ಅವನ್ನಾ ಎಲ್ರೂ ಗಂಗಣ್ಣಾ ಹೇಳೇ ಕರೇತಿದ್ದೊ. ಗಂಗಣ್ಣನ್ನಾ ಮದ್ವೆ ಆಗಿ ಗಂಗಕ್ಕನ ಮನೆ ತುಂಬ್ಸಕಂಡಾಗಾ ಅದ್ಕೆ ಇಪ್ಪತ್ತೊಂದು ವರ್ಷ. ಅಪ್ಪನ್ ಮನೇಲಿ ವ್ಯವಸಾಯವೇ ಅವ್ಕೋಳ್ದು ಮೂಲ ಕಸಬು. ಹಂಗೇ ಹೊಕ್ಕಿದ್ ಮನೇಲಿ ಸಹಾ ಅದೇ ಕಸಬು. ಹಿಂಗಾಗಿ ಮದ್ವೆಯಾಗಿ ಬಂದ ಮನೇಲಿ ಅತ್ತೆ, ಮಾವಾ, ಆಳ್ಗೊ, ಗದ್ದೆ – ತೋಟದ್ ಕೆಲ್ಸಾ ಹೇಳಿ ಕೈ ಬರವಿಲ್ಲಗಿದ್ದಷ್ಟು ಕೆಲ್ಸಾ ಗಂಗಕ್ಕಂಗೆ. ಆದ್ರೆ ಯಾವ್ದಕ್ಕೂ ಬೇಜಾರು ಮಾಡಕಳಗಿದೇ, ಹೊಂದ್ಕಂಡು ಹೋದ ಗಂಗಕ್ಕಾ ಇಡೀ ಊರಿಗೇ ಪ್ರೀತಿಯ “ಗಂಗಕ್ಕ”ನೇ ಆಗೋತು. ದಿನ ಎಂತಾ ಸುಮ್ನೇ ಕೂತಕತ್ತಾ? ಗಂಗಕ್ಕಂಗೆ ಸಾಲಾಗಿ ಮೂರು ಜನಾ ಹೆಣ್ಮಕ್ಕೊ. ಅತ್ತೆ ಸಂಗ್ತಿಗೆ ಪ್ರೀತಿಂದಾ ಇದ್ದದ್ರಿಂದಾ ಮಕ್ಳನ್ನಾ ದೊಡ್ಡಾ ಮಾಡೂದು ಅದ್ಕೆ ಏನೂ ಕಷ್ಟಾ ಆಜಿಲ್ಲೆ. ಈ ಗಂಗಕ್ಕನ ಒಂದು ವಿಶೇಷತೆ ಅಂದ್ರೆ ಮಾತ್ ಮಾತಿಗೂ ಒಂದೊಂದು ಗಾದೆ ಮಾತು ಹೇಳೂ ಪದ್ಧತಿ. ಯಾರಾದ್ರೂ “ಒಂದಾದ ಮೇಲೆ ಒಂದು ಹೇಳಿ ಮೂರೂ ಜನಾ ಹೆಣ್ಮಕ್ಕೋವೇ ಆಗೋದ್ವಲೆ ಗಂಗಕ್ಕಾ” ಅಂದ್ರೆ ಗಂಗಕ್ಕಾ, “ಬಳ್ಳಿಗೆ ಕಾಯಿ ಭಾರವನೆ? ನಂಗೋಕೆ ವಯಸ್ಸಾದ ಮೇಲೆ ಹೆಣ್ಮಕ್ಕೋನೇ ಚೊಲೋದಾಗಿ ಪ್ರೀತಿಂದಾ ನೋಡ್ಕತ್ತೊ ಗುತ್ತಿದ್ದಾ?” ಹೇಳ್ತಿತ್ತು. ಮಕ್ಳನ್ನಾ ಒಳ್ಳೇ ವಿದ್ಯೆ ಕೊಟ್ಟು, ಒಳ್ಳೇ ಸಂಸ್ಕಾರ ಕೊಟ್ಟು ಬೆಳ್ಸಿದ್ದೊ ಗಂಗಕ್ಕಾ ಮತ್ತೆ ಗಂಗಣ್ಣಾ. ಕ್ರಮೇಣ ವಯಸ್ಸಿಗೆ ಬಂದ ಮಕ್ಳನ್ನಾ ಒಳ್ಳೊಳ್ಳೇ ಜಾಗಕ್ಕೇ ಕೊಟ್ಟು ಮದ್ವೆನೂ ಮಾಡಾತು. ಒಂದಿನ ಗಂಗಕ್ಕಾ ಗಂಡನ ಹತ್ರಾ “ಮನೆ ಕಟ್ಟಿ ನೋಡು, ಮದ್ವೆ ಮಾಡಿ ನೋಡು” ಅಂಬಾಂಗೆ ಮೂರೂ ಮಕ್ಳ ಮದ್ವೆ ಮಾಡಿ ಒಂದು ದಡಕ್ಕೆ ಸೇರ್ಸಾತು. ನಾನೂ ಮಕ್ಕೋಗೆ ಹಾಳು ಧೂಳು ಮಾಡಗಿದೆ “ಹಾಸಿಗೆ ಇದ್ದಷ್ಟೇ ಕಾಲು ಚಾಚು” ಹೇಳೂ ತತ್ವಾನೇ ಕಲ್ಸಿದ್ದೆ. ಹಂಗಾಗಿ ಮೂರೂ ಮಕ್ಕೊ ಚೆಂದಾಗಿ

ಹೊಸ ಬರಹ-ಲೇಖನ

Putta 1
ನೆಗೆ ಬುಗ್ಗೆ
ರಾಮಮೋಹನ ಚೆಕ್ಕೆ

ಪುಟ್ಟನ ಬಿಂಗುರ್ಟಿ -29

ಇರುಳು ಒರಕ್ಕಿಲ್ಲಿ ಮಳೆ ಬಂದರೆ… ಜುಲೈ ಎರಡು. ಮಳೆಯೋ ಮಳೆ. ಜಡಿಗುಟ್ಟಿ ಮಳೆ. ಶಾಲಗೆ ರಜೆ ಹೇದು ಮುನ್ನಾಣದಿನಾವೇ ಗೊಂತಾಯಿದು. ಚೆಕ್ಕೆಮಾವಂಗೆ ಬಿಡಿ, ಪುಟ್ಟಂಗೂ ಚಳಿ ಹಿಡುದಿತ್ತು. ಪುಟ್ಟ ಎದ್ದದು ಒಂಬತ್ತು ಗಂಟಗೆ ಅಂತೂ ಇಂತೂ ಮಳೆ ಭಜನೆಲಿಯೇ ಇಡೀ ದಿನ ಕಳಾತು. ಇರುಳಾತು, ಊಟಾತು. ಮಳೆ ಬಿಟ್ಟಿದಿಲ್ಲೆ ಪುಟ್ಟ° ತಲೆ ಹತ್ರಂಗೆ ಕೊಡೆ ಬಿಡಿಸಿಮಡಿಕ್ಕೊಂಡು ಹೊದಕ್ಕೆ ಎರಡು ಎಳಕ್ಕೊಂಡ° ಇದೆಂಸಕೋ ಕೊಡೆ ಒರಗುವಾಗ – ಕೇಟವು ಚೆಕ್ಕೆ ಮಾವ° ಪುಟ್ಟ° ಹೇದ° – ಎಲ್ಯಾರು ನಿನ್ನಾಣಾಂಗೆ ಒರಕ್ಕಿಲ್ಲಿ ಮಳೆ ಬಂದರೆ ಆನೆಂತ ಮಾಡ್ಸು!. ನಿಂಗಳತ್ತರೆ ರೈನು ಕೋಟು ಇದ್ದು. ಆನು ಯಾವ ಬಸ್ಟೇಂಡಿಂಗೆ ಓಡ್ಸು!!

ಮುಂದೆ ಓದಿ »
Shankari Akka Vector
ಅಂಕಣ
ಶಂಕರಿ ಭಟ್‌

ಶಂಕರಿ ಅಕ್ಕನ ಟಿಪ್ಸ್-19

ಕುಂಡಿಗೆ ಹಸಿ ಪಚ್ಚೆಡಿ ನಾವೆಲ್ಲ ಕುಂಡಿಗೆ ಪಚ್ಚೆಡಿ ಮಾಡುದು ಎಲ್ಲರಿಗೂ ಗೊಂತಿಕ್ಕು. ಎಲ್ಲರೂ ಕುಂಡಿಗೆ ಕೊರದು ಬೇಯಿಸಿ ಮಾಡುದು. ಆದರೆ ಆನು ಹಸಿ ಕುಂಡಿಗೆಯ ಪಚ್ಚೆಡಿ ಮಾಡುದು ಹೇಂಗೇಳಿ ಹೇಳುತ್ತೆ. ಕುಂಡಿಗೆ ಪಚ್ಚೆಡಿಗೆ ಕದಳಿ ಬಾಳೆದಾದರೆ ಚಟ್ನಿ ಕೆಂಪಾವುತ್ತು, ಬೇರೆದು ಅಷ್ಟು ಕೆಂಪಾವುತ್ತಿಲ್ಲೆ, ರುಚಿದೆ ಕಮ್ಮಿ. ತೋಟಲ್ಲಿ ಅದೇ ದಿನ ಬಿದ್ದ ಕುಂಡಿಗೆ ಹಾಳೆದೆ ಆವುತ್ತು. ನವಗೆ ಬೇಕಾದಷ್ಟು ಕುಂಡಿಗೆಹಾಳೆ ಮತ್ತೆ ಹುಳಿ ಉಪ್ಪು, ಗಾಂಧಾರಿ ಮೆಣಸು ರಜ ಕಾಯಿಸುಳಿ ಹಾಕಿ ನೊಂಪಿಂಗೆ ಕಡದು, ಬೇಕಾರೆ ಬೆಳ್ಳುಳ್ಳಿ ಹಾಕಿ ಒಂದು ಒಗ್ಗರಣೆ ಕೊಟ್ಟರೆ ಕುಂಡೀಗೆ ಹಸಿ ಚಟ್ನಿ ರೆಡಿ. ಬೇಯಿಸಿ ಮಾಡಿದ ಚಟ್ನಿಂದ ರುಚಿ ಇದಕ್ಕೆ ಹೆಚ್ಚು. ಮರದಿನಕ್ಕೆ ಮಡುಗುಲಾವುತ್ತಿಲ್ಲೆ. ಎಂಗೊ ಸಣ್ಣಾದಿಪ್ಪಗ ಶಾಲೆಯ ಊಟಕ್ಕೆ ಇದನ್ನೇ ಮಾಡಿಕೊಂಡೋಗಿದ್ದದು *** ಒರಳೆಗೆ ಉಪದ್ರಕ್ಕೆ ಮದ್ದು ಮನೆಯ ಮಾಡಿನ ಮರಕ್ಕೆ ಒರಳೆ ಬಂದರೆ, ಹಿಟ್ ಸ್ಪ್ರೇಯ ಲಾಯಕಕ್ಕೆ ಸ್ಪ್ರೇ ಮಾಡಿರೆ ಒಂದು ವರ್ಷಕ್ಕೆ ಒರಳೆ ಉಪದ್ರ ಇಲ್ಲೆ. ಇದು ಎಂಗೊ ಪ್ರಯೋಗ ಮಾಡಿ ನೋಡಿದ್ದೆಯೊ˚.

ಮುಂದೆ ಓದಿ »
Skink
ಇತರೆ
ಪಲ್ಲವಿ ಶ್ಯಾಮ್

ಅರಣೆ ಮರೆವು

ಮನೆಲ್ಲಿ ಎಂತದೋ ಒಂದು ಸಾಮಾನು ಖಾಲಿ ಆಯಿದು, ಅಗತ್ಯವಾಗಿ ಈಗಳೇ ಬೇಕು ಹೇಳಿ ಅದರ ತೆಕ್ಕೊಂಡು ಬಪ್ಪಲೆ ಅಂಗಡಿಗೆ ಹೋದಪ್ಪಗ, ಅಲ್ಲಿ ಆಚದು – ಈಚದು ಹೇಳಿ ಸುಮಾರು ಸಾಮಾನುಗೋ ಕಣ್ಣಿಂಗೆ ಕಂಡಪ್ಪಗ ಇದಿರಲಿ ಅದಿರಲಿ ಹೇಳಿ ತೆಕ್ಕೊಂಡು, ಅಗತ್ಯವಾಗಿ ಬೇಕು ಹೇಳಿ ಹೋದ ಸಾಮಾನಿನ ತೆಗೆಯದ್ದೆ ಬಪ್ಪದು, ಹಾಂಗೆಯೇ ಅಡಿಗೆ ಮಾಡಿಗೊಂಡು ಇಪ್ಪಗ ತಂಪು ಪೆಟ್ಟಿಗೆಂದ ಎಂತೋ ತೆಗೆಯೇಕ್ಕು ಹೇಳಿ ಹೋಗಿ ಅದರ ಬಾಗಿಲು ತೆಗದಪ್ಪಗ ಎಂತ ತೆಗವಲೆ ಹೋದ್ದು ಹೇಳಿಯೇ ನೆಂಪು ಅಪ್ಪಲಿಲ್ಲೆ, ಇದೆಲ್ಲ ಈ ಅರಣೆ ಮರೆವಿಂಗೆ ಉದಾಹರಣೆಗೋ. ಅರಣೆ ಹೇಳಿರೆ ನಿಂಗೊಗೆಲ್ಲ ಗೊಂತಿಕ್ಕು ಅಲ್ಲದಾ? ಕನ್ನಡಲ್ಲಿ ಇದಕ್ಕೆ ಹಾವು ರಾಣಿ ಹೇಳ್ತವಡ. ಈ ಅರಣೆ ನಮ್ಮ ಕಚ್ಚುಲೆ ಹೇಳಿ ತುಂಬಾ ಬೇಗ ಬೇಗ ಹರಕ್ಕೊಂಡು ಬಂದು ನಮ್ಮ ಹತ್ರೆ ಎತ್ತುವಗ ಎಂತಕೆ ಬಂದದು ಹೇಳಿಯೇ ಅದಕ್ಕೆ ಮರತ್ತು ಹೋಗಿ ವಾಪಾಸು ಹೋವುತ್ತು. ಇದು ಸತ್ಯವುದೇ, ಆನು ಕಣ್ಣಾರೆ ಕಂಡಿದೆ, ಆನು ಸಣ್ಣ ಇದ್ದಿಪ್ಪಗ ಅಪ್ಪನ ಮನೇಲಿ ಒಂದು ಕೋಣೆಗೆ ಈ ಅರಣೆ ಓಡಿ ಓಡಿ ಬಕ್ಕು, ನಮ್ಮ ಎಂತು ಮಾಡ ವಾಪಾಸು ಅದರಷ್ಟಕೆ ಹೋಕು. ನಾವುದೇ ಅದರ ಹಾಂಗೆ ಕೆಲವು ಸರ್ತಿ ಮರೆತ್ತ ಕಾರಣ ಅದಕ್ಕೆ ಅರಣೆ ಮರೆವು ಹೇಳಿ ಹೆಸರು ಬಂದದು ಆದಿಕ್ಕು ಉಮ್ಮಪ್ಪ ಎಂತದೋ ನವಗೆ ಗೊಂತಿಲ್ಲೆ. ಈ ಅರಣೆ ಹಾಂಗೆಯೇ ನುಸಿ, ಎರುಗುಗೊಕ್ಕು ಮರೆತಿತ್ತರೆ ಲಾಯಕ ಇರ್ತಿತ್ತು ಅಲ್ಲದಾ, ಎಷ್ಟು ದೊಡ್ಡ ಮನೆ ಇದ್ದರು ಅದಲ್ಲಿ ಸಕಲ ವ್ಯವಸ್ಥೆ ಇದ್ದರೂ ಈ ನುಸಿಗೊ ಕಚ್ಚಿ ಕಚ್ಚಿ ನವಗೆ ನೇರ್ಪಕೆ ಒರಗುಲೂ ಬಿಡ್ತಿಲ್ಲೆ, ಹಾಂಗಾಗಿ ಈ ನುಸಿಗೊಕ್ಕೂ ಅರಣೆ ಮರೆವು ಕೊಡಿ ಹೇಳಿ ದೇವರ ಹತ್ರೆ ಪ್ರಾರ್ಥನೆ ಮಾಡುವ ಆಗದ ಎಂತ ಹೇಳ್ತಿ 😄

ಮುಂದೆ ಓದಿ »
ಗಂಗಕ್ಕ
ಇತರೆ
ಗೀತಾ ಕೃಷ್ಣಮೂರ್ತಿ ಹಾಸ್ಯಗಾರ

ಗಾದೆಮಾತಿನ ಗಂಗಕ್ಕಾ

ಹಳೇ ಕಾಲದ ದೊಡ್ಡ ಮನೆ. ಎದುರಿಗೆ ಕಟಾಂಜನ. ಮುಂಬಾಗಿಲಿಗೆ ಚೆಂದದ ಬಾಗಿಲತೋರಣ. ಅಂಗಳದಲ್ಲೊಂದು ಜೋಕಾಲಿ. ಅದರ ಬದಿಗೇ ಒಂದು ಖುರ್ಚಿ. ಆ ಖುರ್ಚಿಗೆ ನಂಗ್ಳ ಗಂಗಕ್ಕನೇ ಅಲಂಕಾರ. ಮನೆಗೆ ಯಾರೇ ಬರ್ಲಿ, ಯಾರೇ ಹೋಗ್ಲಿ… ಗಂಗಕ್ಕನ ಈ ಜಾಗ ಮಾತ್ರ ಬದ್ಲಾಜೇ ಇಲ್ಲೆ. ಎಲ್ಲದ್ರಲ್ಲೂ ಭಾರೀ ಶಿಸ್ತು. ಗಂಗಕ್ಕನ ಗಂಡಾ ಗಂಗಾಧರಣ್ಣಾ. ಅವನ್ನಾ ಎಲ್ರೂ ಗಂಗಣ್ಣಾ ಹೇಳೇ ಕರೇತಿದ್ದೊ. ಗಂಗಣ್ಣನ್ನಾ ಮದ್ವೆ ಆಗಿ ಗಂಗಕ್ಕನ ಮನೆ ತುಂಬ್ಸಕಂಡಾಗಾ ಅದ್ಕೆ ಇಪ್ಪತ್ತೊಂದು ವರ್ಷ. ಅಪ್ಪನ್ ಮನೇಲಿ ವ್ಯವಸಾಯವೇ ಅವ್ಕೋಳ್ದು ಮೂಲ ಕಸಬು. ಹಂಗೇ ಹೊಕ್ಕಿದ್ ಮನೇಲಿ ಸಹಾ ಅದೇ ಕಸಬು. ಹಿಂಗಾಗಿ ಮದ್ವೆಯಾಗಿ ಬಂದ ಮನೇಲಿ ಅತ್ತೆ, ಮಾವಾ, ಆಳ್ಗೊ, ಗದ್ದೆ – ತೋಟದ್ ಕೆಲ್ಸಾ ಹೇಳಿ ಕೈ ಬರವಿಲ್ಲಗಿದ್ದಷ್ಟು ಕೆಲ್ಸಾ ಗಂಗಕ್ಕಂಗೆ. ಆದ್ರೆ ಯಾವ್ದಕ್ಕೂ ಬೇಜಾರು ಮಾಡಕಳಗಿದೇ, ಹೊಂದ್ಕಂಡು ಹೋದ ಗಂಗಕ್ಕಾ ಇಡೀ ಊರಿಗೇ ಪ್ರೀತಿಯ “ಗಂಗಕ್ಕ”ನೇ ಆಗೋತು. ದಿನ ಎಂತಾ ಸುಮ್ನೇ ಕೂತಕತ್ತಾ? ಗಂಗಕ್ಕಂಗೆ ಸಾಲಾಗಿ ಮೂರು ಜನಾ ಹೆಣ್ಮಕ್ಕೊ. ಅತ್ತೆ ಸಂಗ್ತಿಗೆ ಪ್ರೀತಿಂದಾ ಇದ್ದದ್ರಿಂದಾ ಮಕ್ಳನ್ನಾ ದೊಡ್ಡಾ ಮಾಡೂದು ಅದ್ಕೆ ಏನೂ ಕಷ್ಟಾ ಆಜಿಲ್ಲೆ. ಈ ಗಂಗಕ್ಕನ ಒಂದು ವಿಶೇಷತೆ ಅಂದ್ರೆ ಮಾತ್ ಮಾತಿಗೂ ಒಂದೊಂದು ಗಾದೆ ಮಾತು ಹೇಳೂ ಪದ್ಧತಿ. ಯಾರಾದ್ರೂ “ಒಂದಾದ ಮೇಲೆ ಒಂದು ಹೇಳಿ ಮೂರೂ ಜನಾ ಹೆಣ್ಮಕ್ಕೋವೇ ಆಗೋದ್ವಲೆ ಗಂಗಕ್ಕಾ” ಅಂದ್ರೆ ಗಂಗಕ್ಕಾ, “ಬಳ್ಳಿಗೆ ಕಾಯಿ ಭಾರವನೆ? ನಂಗೋಕೆ ವಯಸ್ಸಾದ ಮೇಲೆ ಹೆಣ್ಮಕ್ಕೋನೇ ಚೊಲೋದಾಗಿ ಪ್ರೀತಿಂದಾ ನೋಡ್ಕತ್ತೊ ಗುತ್ತಿದ್ದಾ?” ಹೇಳ್ತಿತ್ತು. ಮಕ್ಳನ್ನಾ ಒಳ್ಳೇ ವಿದ್ಯೆ ಕೊಟ್ಟು, ಒಳ್ಳೇ ಸಂಸ್ಕಾರ ಕೊಟ್ಟು ಬೆಳ್ಸಿದ್ದೊ ಗಂಗಕ್ಕಾ ಮತ್ತೆ ಗಂಗಣ್ಣಾ. ಕ್ರಮೇಣ ವಯಸ್ಸಿಗೆ ಬಂದ ಮಕ್ಳನ್ನಾ ಒಳ್ಳೊಳ್ಳೇ ಜಾಗಕ್ಕೇ ಕೊಟ್ಟು ಮದ್ವೆನೂ ಮಾಡಾತು. ಒಂದಿನ ಗಂಗಕ್ಕಾ ಗಂಡನ ಹತ್ರಾ “ಮನೆ ಕಟ್ಟಿ ನೋಡು, ಮದ್ವೆ ಮಾಡಿ ನೋಡು” ಅಂಬಾಂಗೆ ಮೂರೂ ಮಕ್ಳ ಮದ್ವೆ ಮಾಡಿ ಒಂದು ದಡಕ್ಕೆ ಸೇರ್ಸಾತು. ನಾನೂ ಮಕ್ಕೋಗೆ ಹಾಳು ಧೂಳು ಮಾಡಗಿದೆ “ಹಾಸಿಗೆ ಇದ್ದಷ್ಟೇ ಕಾಲು ಚಾಚು” ಹೇಳೂ ತತ್ವಾನೇ ಕಲ್ಸಿದ್ದೆ. ಹಂಗಾಗಿ ಮೂರೂ ಮಕ್ಕೊ ಚೆಂದಾಗಿ ಜೀವನಾ ಮಾಡ್ತೊ ಹೇಳೂ ಭರವಸೆ ನಂಗಿದ್ದು” ಅಂತು. ಗಂಗಣ್ಣಂಗೂ ಹಂಗೇ ಅನ್ಸದ್ದು ಸುಳ್ಳಲ್ಲಾ.      “ಹಿರೀ ಮಗಳು ಸಾವಿತ್ರಿ ಮನೇಲಿ ಲಕ್ಷ್ಮಿ ಕಾಲ್ ಮುರ್ಕಂಡು ಬಿಜ್ಜು. ಆದ್ರೂ ನನ್ನ ಅಳಿಯಂಗೆ ಒಂಚೂರೂ ಗರ್ವ ಇಲ್ಲೆ. “ಊರಿಗೆ ಅರಸನಾದ್ರೂ ತಂದೆಗೆ ಮಗ” ಹೇಳ್ತ್ವಲಿ, ಹಂಗೇ ನನ್ನ ಅಳಿಯಾ ತಂದೆ ತಾಯೀನಾ ಅಷ್ಟು ಜೋಪಾನ್ವಾಗ್‌ ನೋಡ್ಕತ್ತಾ. “ತುಂಬಿದ ಕೊಡ ತುಳಕ್ತಿಲ್ಲೆ” ಹೇಳೂದಕ್ಕೆ ನನ್ನ ಅಳಿಯನೆ ಸಾಕ್ಷಿ ನೋಡು ಭಾಗ್ಯಾ” ಹೇಳಿ ಗೆಳತಿ ಭಾಗ್ಯನ ಹತ್ರಾ ಹೇಳ್ಕತ್ತಿದ್ದಿತ್ತು ಒಂದಿನ. ಹಂಗೇ ಹಿರೀ ಮಗಳು ಸಾವಿತ್ರೀನಾ ಗಂಡನ ಮನೆಗೆ ಕಳ್ಸಕಾದ್ರೆ, “ನೋಡು ಸಾವಿತ್ರಿ, ಮಾತು ಬಲ್ಲವಂಗೆ ಜಗ್ಳಾ ಇಲ್ಲೆ; ಊಟ ಬಲ್ಲವಂಗೆ ರೋಗ ಇಲ್ಲೆ”. ಗಂಡನ ಮನೇಲಿ ಚೆಂದಾಗಿ ಸಂಸಾರ ಮಾಡು ಮಗ್ಳೇ. “ಸಂಸಾರದ ಗುಟ್ಟು, ವ್ಯಾಧಿ ರಟ್ಟು” ಅದ್ಕಾಗಿ ಮನೆಯ ಗುಟ್ಟನ್ನಾ ಯಾರಿಗೂ ಬಿಟ್ಕೊಡಡಾ” ಹೇಳಿ ಮಗಳಿಗೆ ಬುದ್ಧಿವಾದ ಹೇಳೂಲೆ ಮರೇಜಿಲ್ಲೆ ಗಂಗಕ್ಕಾ. ಇನ್ನು ಎರಡನೇ ಮಗಳು ಗಿರಿಜೆ. ರೂಪದಲ್ಲಿ ಸೀದಾ ಸಾದಾ ಇದ್ದು. “ಹೆತ್ತಮ್ಮಂಗೆ ಹೆಗ್ಣಾ ಮುದ್ದು” ಹೇಳ್ತೊ. ಹಂಗೇ ನೀನು ರೂಪವಂತೆ ಅಲ್ಲಾ ಹೇಳಿ ಯಾರಾದ್ರೂ ಹೇಳದ್ರೆ ನೀನು ಬೇಜಾರು ಮಾಡಕಳಡಾ. ನಿಜವಾಗಿ ನೋಡದ್ರೆ ಗುಣದಲ್ಲಿ ನೀನೇ ರೂಪವಂತೆ. ನೀನು ಮದ್ವೆ ಆಗ್ತಿದ್ದ ಮಾಣಿಯ ಮನೆ ದೊಡ್ಡ ಕುಟುಂಬಾ. ಹಂಗಿದ್ಮೇಲೆ ಒಂದ್ಮಾತು ಬತ್ತು, ಒಂದ್ಮಾತು ಹೋಗ್ತು. ಆಗೆಲ್ಲಾ “ಮಾತು ಬೆಳ್ಳಿ, ಮೌನ ಬಂಗಾರ” ಹೇಳೂದನ್ನಾ ಮರ್ಯಡಾ. ಇದನ್ನ ಮರ್ತೆ ಅಂದ್ರೆ, “ತಾಯಿಯಂತೆ ಮಗಳು, ನೂಲಿನಂತೆ ಸೀರೆ” ಹೇಳಿ ನನಗೇ ಕೆಟ್ಟ ಹೆಸ್ರು ತಂದಾಂಗಾಗ್ತು ನೆನಪಿಟ್ಕೊ. ಯಾವ್ದಕ್ಕೂ ಅತೀ ಆಸೆ ಮಾಡಡಾ. “ಅತಿಯಾಸೆ ಗತಿಗೇಡು” ಹೇಳಿ ಆಗೋಗ್ತು ಮತ್ತೆ ಹಾಂ?” ಹೇಳಿ ಕಿವಿಮಾತು ಹೇಳೇ ಗಂಡನ ಮನೆಗೆ ಕಳ್ಸಿಕೊಟ್ಟಿದ್ದು ಗಂಗಕ್ಕಾ. ಮೂರನೇ ಮಗಳು ವಿದ್ಯಾ ಇದ್ದಲಿ, ಅದ್ರ ಹೆಸ್ರು ಸರಸ್ವತಿದಾದ್ರೂ ಸರಸ್ವತಿ ಒಲೀಜೇ ಇಲ್ಲೆ. ಗಂಗಕ್ಕಾ ಮಗಳನ್ನ ಕೂರ್ಸಕಂಡು ಸಣ್ಣಕ್ಕಿದ್ದಾಗಿಂದಾ  ಹೇಳದ್ದು ಎಂತದು ಅಂದ್ರೆ, “ಓದು ಒಕ್ಕಾಲು, ಬುದ್ಧಿ ಮುಕ್ಕಾಲು” ಹೇಳೇ ಗಾದೆ ಇದ್ದು ಮಗ್ಳೇ. ಬರೀ ಓದೂದೇ ಮುಖ್ಯ ಅಲ್ಲಾ, ಅದನ್ನಾ ಅರ್ಥ ಮಾಡ್ಕಂಡು ಬುದ್ಧಿ ಬೆಳೇಸ್ಕಳೊ. ಕಡೇಗೆ ಮದ್ವೆ ಆದಮೇಲೆ ಹೋದ ಮನೇಲಿ ಧಡ್ಡಿ, ಛೀ …ಥೂ…. ಹೇಳ್ಕಂಬ ಹಂಗೆ ಅಪ್ದು ಬೇಡಾ. “ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ”  ಹೇಳ್ತೊ. ಹಂಗಾಗಿ ನೀನು ಈಗ್ಲಿಂದಾನೇ ಒಳ್ಳೇ ಸಂಸ್ಕಾರ ಪಡಕಂಬ್ದು ಒಳ್ಳೇದು, ಕಡೆಗೆ ಅಂದ್ರೆ ಆಗ್ತಿಲ್ಲೆ, ಗುತ್ತಾತನೆ ವಿದ್ಯಾ” ಹೇಳಿ ಬುದ್ಧಿ ಮಾತನ್ನಾ ಹೇಳಿ ಒಳ್ಳೇ ಸಂಸ್ಕಾರವಂತೆಯಾಗಿ ಮಾಡಿದ್ದು ಗಂಗಕ್ಕಾ. ಈಗಾ ಅದನ್ನೂ ಒಳ್ಳೇ ಮನೆತನಕ್ಕೇ ಮದ್ವೆ ಮಾಡಿಕೊಟ್ಟಿದ್ದೊ. ಈಗಾ ಅವ್ಕೋಳ ಜವಾಬ್ದಾರಿ ಮುಗೀಜು. ಗಂಗಕ್ಕನ ಅತ್ತೆ – ಮಾವಾ ಇಹಲೋಕದ ಯಾತ್ರೆ ಮುಗ್ಸಿ ಶಿವನ ಪಾದಾ ಸೇರಿದ್ದೊ. ಹೆಣ್ಮಕ್ಕೊ, ಅಳಿಯಂದಿಕ್ಕೊ, ಮೊಮ್ಮಕ್ಕೊ ಎಲ್ಲಾ ಆಗಾಗ ಮನೆಗೆ ಬಂದು ಹೋಗಿ ಮಾಡ್ತೊ. ಹೆಣ್ಮಕ್ಕಳ ಮದ್ವೆ, ಬಾಣಂತನ ಎಲ್ಲಾ ಮುಗ್ದು,  ಇನ್ನು ಅರಾಮಿನ ಸುಖ ಜೀವನ ಅಂದಕಂಬಲ್ಲೀವರೆಗೆ ಒಂದಿನ ರಾತ್ರಿ ಮನೀಕಂಡ ಗಂಗಣ್ಣಾ ಮರುದಿನದ ಸೂರ್ಯೋದಯಾನೆ ಕಂಡೀನಿಲ್ಲೆ. ನಿದ್ರೆಯಲ್ಲೇ ಇಹಲೋಕ ಯಾತ್ರೆ ಮುಗ್ಸಿಕಿಜಾ. ಇದಾಗಿ ಐದು ವರ್ಷಾ ಆಗೋಜು. ಗಂಗಕ್ಕಂಗೆ ಈಗ ಹತ್ರತ್ರಾ 85 ವರ್ಷಾ. ಜೀವನದ ಎಲ್ಲಾ ಏರಿಳಿತಗಳನ್ನಾ

ಮುಂದೆ ಓದಿ »
Share Image
ನೆಗೆ ಬುಗ್ಗೆ
ಉದಯರವಿ ಕೋಂಬ್ರಾಜೆ

ಮದರಾಸಿ ಭಾ(ಬಾ)ವ…!

ಎಂಗಳ ಮದರಾಸಿ ಭಾವ° ಪ್ರತಿ ಸರ್ತಿ ಇಲ್ಲಿಗೆ ಊರಿಂಗೆ ಬಂದಿಪ್ಪಗಳೂ …’ನಿಂಗೊ ಎಂಗಳಲ್ಲಿಗೆ ಬಯಿಂದೇ ಇಲ್ಲೆ… ಅಲ್ಲಿ ಪ್ರವಾಸೀ ತಾಣಂಗೊ ಇದ್ದು, ಬೀಚಿದ್ದು, ಹಾಂಗಿದ್ದು ಹೀಂಗಿದ್ದು…. ಮಕ್ಕೊಗೆ ನೋಡುಲೆ ಸುಮಾರಿದ್ದು .. ಬನ್ನಿ .. ಬನ್ನಿ’ ಹೇದು ಒರಂಜುವದು … ಸುಮಾರು ಸರ್ತಿ ಆತೂಳಿ …. ಈ ಸರ್ತಿ ಅವನಲ್ಲಿಗೆ ಹೋಪದೂಳಿ… ದೊಡ್ಡ ರಜೆ ಸಿಕ್ಕದ ಕೂಡಲೆ ಎಂಗೊ ಭಾವಂಗೆ ಫೋನು ಮಾಡಿ ಹೆರಟೇ ಬಿಟ್ಟೆಯೋಂ…ಆನು, ಎನ್ನೊಂದೆಂಡತ್ತಿ ಮತ್ತೆ ಮಗ°… ರೈಲಿಲ್ಲಿ ಹೋದ್ದದು… ರೈಲಿಲ್ಲೇ ಆಯೆಕ್ಕೂ ಹೇದು ಇವರದ್ದು ಹಠ. ಮದರಾಸಿಂಗೆ ಉದಿ ಉದಿಯಪ್ಪಗಳೇ ಹೇಂಗೋ ಎತ್ತಿತ್ತು…ಅಲ್ಲಿ ಗೆಂಡು ಹೆಣ್ಣು ಭೇದ ಇಲ್ಲೆ…. ಸಾಲಾಗಿ ಮಾರ್ಗದ ಕರೆಲಿ ನೆಗ್ಗಿ ತುರ್ಕಾಲಿಲ್ಲಿ ಕೂದು ಅವರ ಕೆಲಸಮಾಡಿಯೊಂಡಿತ್ತವು…ಹಾಂಗೆ ಹಿಂದೆ ಹಂದಿಗೊ ಅವರ ಕೆಲಸ …! ಎಂಗೊ ಮೂಗು ಪತ್ತಿ ಕಣ್ಣು ಮುಚ್ಚಿ ಹೇಂಗಾರು ರಿಕ್ಷಾ ಸ್ಟೇಂಡಿಂಗೆ ಬಂದೆಯೋಂ.. ಏವದಕ್ಕೂ ಭಾಷೆ ಬತ್ತಿಲ್ಲೆ… ಭಾವಂಗೆ ಫೋನು ಮಾಡಿರೆ ….”ಈ ನಂಬರ್ ಬಿಜಿ ಇರ್ಕ್ ಕೊಂಜನೇರ ವಿಟ್ ಪಾರುಂಗೊ”…. ಹೇಳತ್ತಾ ಇತ್ತು – ಹಾಂಗಾಗಿ ಒಂದು ರಿಕ್ಷದ್ದರತ್ತರೆ ಎಡ್ರಸ್ ಹೇಳಿ.. ಬತ್ತೆಯಾ ಕೇಳಿರೆ…”ನಾ ಅಂಗೆ ಪೋಗಮಾಟ್ಟೆ….ಅವ° ಬರುವನೋ° ಕೇಳ್ಂಗೆ…” ಹೇದಿಕ್ಕಿ ಇನ್ನೊಂದರ ತೋರುಸಿಕ್ಕಿ ಪುಡ್ಚಾ… ಕಟ್ಟಂಗಳೆಲ್ಲ ಹೊರುಲೆ ಆನು… ಎಜಮಾನ್ತಿಗೆ ಮಗನ ಮೇಪಿಂಗೆ… ಸೇಂಕುಬಿಟ್ಟೊಂಡು ಹೇಂಗೋ ಒಂದು ರಿಕ್ಷ ಹಿಡಿದು ಸುತ್ತಿ ಸುತ್ತಿ ಭಾವನಲ್ಲಿಗೆ ಎತ್ತುವಗ 11 ಗಂಟೆ.. ಉದಿಯಪ್ಪಗಾಣ ತಿಂಡಿ ಕಾಪಿ ಆಯಿದಿಲ್ಲೆ… 2 ದಿನಂದ ಸರಿ ಮೀಯಾಣವೂ ಇಲ್ಲೆ.. ಹುಳಿ ಹುಳಿ ನಾರಿಯೊಂಡು.. ಹೆಂಡತ್ತಿ ಮಗನ ಪಿರಿಪಿರಿ.. ಹೊಟ್ಟೆ ಬೇರೆ ಗುಳುಗುಳು… ಅಲ್ಲಿ ಜಾಲಿನ ಮೂಲೆಲಿ ಚೆಂಡ್ರಕ್ಕು ಸುತ್ತಿಯೊಂಡು .. ಭಾವ ಗೆಡ್ಡ ಗೀಸಿಯೊಂಡು ಕೂದೊಂಡು ಇತ್ತ…. ಕೈಲಿ ಬ್ಲೇಡಿದ್ದಕಾರಣವೋ ಏನೋ…. ಮೂಗನ ಹಾಂಗಿತ್ತ… ಎಂಗೊ ಎತ್ತಿದೆಯೋ° ಹೇದರೂ ಎಂತ ಸಂಭ್ರಮ ಕಂಡತ್ತಿಲ್ಲೆ… ಅವನ ಹೆಂಡತ್ತಿ ಒಳಂದಲೇ…. “ಅದಾ ಗೇಟಿನತ್ರೆ…. ನಿಂಗಳ ಕಡೆಯವು ಆರೋ ಬಂದವದ… ನಿಂಗಳ ಗೆಡ್ಡ ಗೀಸಾಣಾದರೆ….ಅವರ ಕೈಕಾಲು ತೊಳವಲೆ ಹೇಳಿ ಜೆಗಿಲಿಲಿ ಕೂರುಸಿ…. ಆನು .. ಏಕೆ ಇವರ ಇನ್ನೂ ಕಾಣುತ್ತಿಲ್ಲೆ ಹೇದು ದೋಸೆಯ ಅಲ್ಲಿ ಅಡಿಗೆ ಕೋಣೆಲಿ ಕರೆಲಿ ತಟ್ಟೆಲಿ.. ನಾಯಿಗೇ ಹಾಕೆಕಷ್ಟೇಳಿ ಮಡುಗಿದ್ದೆ ….ಇನ್ನು ಅದರ ಇವಕ್ಕೇ ಕೊಡಿ ಆತಾ….ಆನು ಮಿಂದು ಬತ್ತೇ…ಮತ್ತೆ ನೀರು ಬಪ್ಪ್ ದು ನಿಲ್ಲುಗು…” ಹೇದೊಂಡು ಮನೆ ಹಿಂದಂಗೆ ಒರುಂಕಿಲ್ಲಾಗಿ ಓಡಿತ್ತು… ಎಂಗಳತ್ತರೆ ಮಾತಾಡುದು ಬಿಡಿ.. ಒಳಬಪ್ಪಲೂ ಹೇಳಿದ್ದಿಲ್ಲೆ ಆ ಸುಭಗೆತ್ತಿ… ಅಷ್ಟಪ್ಪಗಳೇ ಎನಗೆ ಈ ಭಾವಂಗೆ ಮನೇಲಿ ಬೀಲ ಇಲ್ಲೇ … ಬರೀ ಹೆರ ಊರಿಲ್ಲಿ ಮಾತ್ರ ಬೀಲ ಆಡುಸುವದು ಇವ° ಹೇದು ಗೊಂತಾತು… ಎನ್ನ ಹೆಂಡತಿಯ ಮೋರೆ ಓರೆಗೆ ನೋಡಿರೆ ಉರಿದರುಸಿಯೊಂಡಿತ್ತು… “ಆತನ್ನೆ ಭಾವ/ಬಾವನ ಭೇಟಿ… ಬೇಗ ಹೆರಡಿ…” ಹೇಳುವ ಹಾಂಗೆ ಇತ್ತದರ ಮೋರೆ… ಬೊಗಳೆ ಮದರಾಸೀ ಬಾವನತ್ತರೆ.. “ನೀ ಹೇಳಿದ್ದಕ್ಕೆ ಬಂದೆಯೋಂ… ಇನ್ನು ಎಂಗೊ ಉಡುಪಿ ಹೋಟೆಲಿಲ್ಲಿ ತಿಂಡಿಕಾಪಿ ಮಾಡಿಕ್ಕಿ… ಲೋಡ್ಜ ರೂಮು ಮಾಡಿಯೊಂಡು ಎರಡು ದಿನ ಮದರಾಸಿನ ಸುತ್ತಿಕ್ಕಿಯೇ ಹೋವುತ್ತೆಯೋಂ….”ಹೇದು ಹೆರಡುವಗ … ಅವನ ಹೆಂಡತ್ತಿ ಅಲ್ಲೆಲ್ಲಿಯೋ ಒರುಂಕಿನೆಡೆಂದ … “ಓಯ್.. ನಿಂಗೊ ಸುತ್ತಿದ ಚೆಂಡ್ರಕ್ಕು ಎನ್ನದು…ಬೇಗ ಕೊಡಿ ಎನಗೆ… ಜಾಮ ಗೊತ್ತಾತು..” ಹೇದಪ್ಪಗ ಎನಗೆ ಎಲ್ಲಾ ಅರ್ಥ ಆತು… ಊರಿಂಗೆ ಬಂದಿಪ್ಪಗ ದಿನಾ ಬಾವಂದು ಒಂದೊಂದು ಗಂಟೆ ಮೀಯಾಣ…ವಾರಗಟ್ಳೆ ಠಿಕಾಣೆ ಹೂಡಿಯೊಂಡು ಹೊತ್ತೊತ್ತು ಮೂಕುಮುಟ್ಟ ಬೂಸಾ ಹೊಡಕ್ಕೊಂಡಿತ್ತದು ಎಂತಕೇ ಹೇದು…. ಅಷ್ಟಪ್ಪಗ ಬಾವ ಹೇದ್ದದೆಂತರ ಗೊಂತಿದ್ದಾ….”ಆರತ್ತರೂ ಊರಿಲ್ಲಿ ಇಲ್ಲಿಯಾಣ ಸಂಗತಿ ಹೇಳಿಕ್ಕೆಡಿ….”ಹೇದು…!!! (ಕಟ್ಟಾ ಕಾಲ್ಪನಿಕ ವಸ್ತು -ನಗೆಬರಹ #ನೆನೆಗೋಲಿನಿಂದ)

ಮುಂದೆ ಓದಿ »
Img 5733
ಅಂಕಣ
ಡಾ. ವಿದ್ಯಾ ಎಸ್‌.

ಸೋತು ಗೆಲ್ಲುವೊ॰

ಜೀವನ ಹೇಳ್ತದು ಒಂದು ನಿರಂತರ ಪಯಣ. ಈ ಪಯಣಲ್ಲಿ ಆರಿಂಗೂ ಹೂಗಿನ ಹಾಸಿಗೆಯೇ ಸಿಕ್ಕ. ಪ್ರತಿಯೊಬ್ಬರ ಬದುಕಿಲ್ಲಿಯೂ ಏರಿಳಿತಂಗೊ ಇದ್ದೇ ಇರ್ತು. ಕೆಲವೊಂದಾರಿ ಗೆಲುವಿನ ನೆಗೆ ಮೋರೆಯ ಅರಳಿಸಿದರೆ, ಇನ್ನು ಕೆಲವು ಸರ್ತಿ ಸೋಲಿನ ಕತ್ತಲೆ ಮನಸ್ಸಿನ ಆವರಿಸುತ್ತು. ಆದರೆ ಸೋಲು ಹೇಳಿದರೆ ಬದುಕಿನ ಅಕೇರಿಯ ತೀರ್ಪಲ್ಲ. ಅದು ಪುನಃ ಎದ್ದು ನಿಂಬಲೆ, ಹೊಸ ದಾರಿಯ ಹುಡುಕಲೆ, ತನ್ನ ಸಾಮರ್ಥ್ಯವ ತಿಳುಕ್ಕೊಂಬಲೆ ಸಿಕ್ಕುವ ಅಮೂಲ್ಯ ಅವಕಾಶ. ಹಾಂಗಾಗಿ ನಾವು “ಸೋತು ಗೆಲ್ಲುವೊ॰” ಹೇಳ್ತ ಮನೋಭಾವವ ಬೆಳೆಶಿಗೊಳ್ಳೆಕು. ನಾವು ಸಾಮಾನ್ಯವಾಗಿ ಸೋಲಿನ ನಕಾರಾತ್ಮಕವಾಗಿ ನೋಡುತ್ತು. ಪರೀಕ್ಷೆಲ್ಲಿ ನಪಾಸಾದರೆ ಜೀವನ ಮುಗಿದೇ ಹೋತು ಹೇಳಿ ಗ್ರೇಶುತ್ತು. ಉದ್ಯೋಗ ಸಿಕ್ಕದ್ದರೆ ನಮ್ಮತ್ತರೆ ಪ್ರತಿಭೆಯೇ ಇಲ್ಲೆ ಹೇಳಿ ನಿರ್ಧರಿಸುತ್ತು. ಒಂದು ಸಂಬಂಧ ಮುರುದರೆ ಪ್ರಪಂಚವೇ ಕುಸಿದುಬಿದ್ದ ಹಾಂಗಾವ್ತು. ಆದರೆ ಜೀವನದ ನಿಜವಾದ ಅರ್ಥವೇ ಬೇರೆ. ನದಿ ತನ್ನ ದಾರಿಲ್ಲಿ ಬಂಡೆಗಳ ಕಂಡರೂ ಹರಿವದರ ನಿಲ್ಲಿಸುತ್ತಿಲ್ಲೆ. ಮರಂಗೊ ಎಲೆಗಳ ಉದುರಿಸಿದರೂ ಮತ್ತೆ ಚಿಗುರುತ್ತು. ಸೂರ್ಯ॰ ಪ್ರತಿದಿನ ಮುಳುಗಿದರೂ ಮರುದಿನ ಮೂಡುತ್ತ॰. ಪ್ರಕೃತಿಯೇ ನವಗೆ ಹೇಳುವ ಸಂದೇಶ ಒಂದೇ … ಸೋಲು ಶಾಶ್ವತ ಅಲ್ಲ ಹೇಳಿ. ಮಕ್ಕೊ ನಡವಲೆ ಕಲಿವಗ ತುಂಬ ಸರ್ತಿ ಬೀಳುದು ಸಹಜ. ಆದರೆ ಬೀಳುತ್ತಕ್ಕೆ ಹೆದರಿ ಮತ್ತೆ ಎದ್ದು ನಿಲ್ಲದ್ದರೆ, ನಡೆವಲೇ ಕಲಿಯ. ಜೀವನವೂ ಹಾಂಗೆಯೇ. ನಾವು ಎದುರಿಸುವ ಪ್ರತಿಯೊಂದು ಸೋಲು ನಮ್ಮ ಇನ್ನಷ್ಟು ಪ್ರಬುದ್ಧರನ್ನಾಗಿ ಮಾಡುತ್ತು. ಅನುಭವ ಹೇಳ್ತ ಗುರು ಯಾವ ಪಾಠವನ್ನೂ ಸೋಲಿನಷ್ಟು ಪರಿಣಾಮಕಾರಿಯಾಗಿ ಕಲಿಸುತ್ತಿಲ್ಲೆ. ಸಾಹಿತ್ಯಲ್ಲೂ, ಇತಿಹಾಸಲ್ಲೂ, ವಿಜ್ಞಾನಲ್ಲೂ ಸೋತು ಗೆದ್ದವರ ಕಥೆಗೊ ತುಂಬಿಗೊಂಡಿದು. ಸಾವಿರಾರು ಪ್ರಯೋಗಂಗೊ ವಿಫಲವಾದ ನಂತರವೇ ವಿದ್ಯುತ್ ದೀಪವ ಕಂಡುಹಿಡಿವಲಾದ್ದಡ. ಅನೇಕ ಯುದ್ಧಂಗಳಲ್ಲಿ ಹಿನ್ನಡೆ ಅನುಭವಿಸಿದ ನಾಯಕರು ಅಕೇರಿಗೆ ದೇಶವ ವಿಜಯದತ್ತ ಕೊಂಡೋದ್ದು. ಕಲಾವಿದರು ಆರಂಭಲ್ಲಿ ಟೀಕೆಗಳ ಎದುರಿಸಿದರೂ ತಮ್ಮ ಪ್ರತಿಭೆಂದ ವಿಶ್ವದ ಮೆಚ್ಚುಗೆ ಪಡೆದವು. ಈ ಎಲ್ಲ ಸಾಧನೆಗಳ ಹಿಂದೆ ಒಂದೇ ಸಂದೇಶ ಅಡಗಿದ್ದು—ಸೋಲಿಂಗೆ ಶರಣಾಗದ್ದ ಮನಸ್ಸೇ ಗೆಲುವಿನ ನಿಜವಾದ ಮೂಲ. ನಮ್ಮ ಶಿಕ್ಷಣ ವ್ಯವಸ್ಥೆಲ್ಲಿ ಮಾರ್ಕುಗೊಕ್ಕೆ ಅತಿಯಾದ ಮಹತ್ವ ಕೊಡುವ ಪ್ರವೃತ್ತಿ ಬೆಳೆದ್ದು. ಪರಿಣಾಮವಾಗಿ ಮಕ್ಕೊ ಸೋಲಿನ ಸ್ವೀಕರಿಸಲೆ ಕಲಿತ್ತವಿಲ್ಲೆ. ಕಡಮ್ಮೆ ಮಾರ್ಕು ಬಂದರೆ ಆತ್ಮವಿಶ್ವಾಸ ಕಳಕೊಳ್ಳುತ್ತವು. ಆದರೆ ಜೀವನದ ಪರೀಕ್ಷೆಲಿ ಅಂಕಪಟ್ಟಿ ಇರ್ತಿಲ್ಲೆ. ಅಲ್ಲಿ ಧೈರ್ಯ, ಪರಿಶ್ರಮ, ಮಾನವೀಯತೆ ಹಾಂಗೇ ಸಹನೆಗೆ ಮಾಂತ್ರ ಬೆಲೆ. ಪುಸ್ತಕದ ಜ್ಞಾನಕ್ಕಿಂತ ಬದುಕಿನ ಜ್ಞಾನವೇ ಮನುಷ್ಯನ ಎತ್ತರಕ್ಕೆ ಕೊಂಡೋವ್ತು. ಸೋಲು ನಮ್ಮ ತಗ್ಗಿ ಬಗ್ಗುಲೆ ಕಲುಶುತ್ತು. ಗೆಲುವು ಕೆಲವೊಂದಾರಿ ಅಹಂಕಾರವ ಹುಟ್ಟಿಸುಗು. ಆದರೆ ಸೋಲು ನಮ್ಮ ಮಿತಿಗಳ ತೋರಿಸುತ್ತು. ನಮ್ಮ ದೌರ್ಬಲ್ಯಂಗಳ ಅರ್ಥ ಮಾಡುಸುತ್ತು. ನಮ್ಮೊಳಾಣ ಹೊಸ ಶಕ್ತಿಯ ಹೆರತೆಗೆದು ನಿಲ್ಲಿಸುತ್ತು. ಸೋಲಿನ ಬೇನೆ ಅನುಭವಿಸಿದ ವ್ಯಕ್ತಿಲೇ ಇತರರ ದುಃಖವ ಅರ್ಥಮಾಡಿಗೊಂಬ ಸಂವೇದನೆ ಹೆಚ್ಚಾಗಿರುತ್ತು. ಕೃಷಿಕನ ಬದುಕಿನ ಗಮನಿಸಿದರೆ, ಪ್ರತಿಯೊಂದು ವರ್ಷವೂ ಸಮೃದ್ಧ ಬೆಳೆಯೇ ಸಿಕ್ಕುತ್ತೂಳಿ ಏನಿಲ್ಲೆ. ಕೆಲವೊಂದಾರಿ ಮಳೆ ಕೈಕೊಡುತ್ತುದೆ, ಕೆಲವೊಂದಾರಿ ಬೆಳೆ ಹಾಳಾವುತ್ತುದೇ. ಆದರೂ ಅವ॰ ಮುಂದಿನ ವರ್ಷಕ್ಕೆ ಬೇಕಾಗಿ ಮತ್ತೆ ಪುನಃ ಉಳುಮೆ ಮಾಡುತ್ತ॰. ಏಕೆ ಹೇಳಿದರೆ ಅವಂಗೆ ಗೊಂತಿದ್ದು—ಒಂದು ಸೋಲು ಜೀವನಪೂರ್ತಿಯ ಸೋಲಲ್ಲ ಹೇಳಿ. ಇದೇ ಆಶಾವಾದವೇ ಸಮಾಜವ ಮುನ್ನಡೆಶುವ ನಿಜವಾದ ಶಕ್ತಿ. ಜವ್ವನಿಗರು ಇಂದು ಸ್ಪರ್ಧಾತ್ಮಕ ಜಗತ್ತಿಲ್ಲಿ ಬದುಕುತ್ತಾ ಇದ್ದವು. ಉದ್ಯೋಗ, ಶಿಕ್ಷಣ, ವ್ಯವಹಾರ ಹೀಂಗೆ ಎಲ್ಲಾ ಕಡೆಲಿಯೂ ಪೈಪೋಟಿ. ಕೆಲವೊಂದಾರಿ ಅನೇಕ ಪ್ರಯತ್ನಂಗಳ ನಂತರವೂ ಯಶಸ್ಸು ಸಿಕ್ಕುತ್ತಿಲ್ಲೆ. ಅಂತಹ ಸಂದರ್ಭಂಗಳಲ್ಲಿ ನಿರಾಶೆ ಆವರುಸುದು ಸಹಜ. ಆದರೆ ನಿರಾಶೆಗೆ ಬದಲಾಗಿ ಆತ್ಮವಿಶ್ವಾಸವ ಆರಿಸಿಗೊಂಡರೆ ಸೋಲು ಯಶಸ್ಸಿನ ಮೆಟ್ಟಿಲಾವುತ್ತು. ಪ್ರತಿಯೊಂದು ವಿಫಲತೆಯೂ ನಮಗೆ “ಈ ದಾರಿ ಸರಿಲ್ಲೆ, ಇನ್ನೊಂದು ದಾರಿ ಹುಡುಕು” ಹೇಳ್ತ ಸಂದೇಶ ಆಗಿರ್ತು. ಸೋಲು ನಮ್ಮ ವ್ಯಕ್ತಿತ್ವವ ರೂಪಿಸುತ್ತು. ಕಷ್ಟಂಗಳ ಎದುರಿಸಿದವರ ಮನಸ್ಸು ಹೆಚ್ಚು ದೃಢವಾಗಿರುತ್ತು. ಬಿರುಗಾಳಿಯ ಎದುರಿಸಿದ ಮರವೇ ಗಟ್ಟಿಯಾದ ಬೇರುಗಳ ಬೆಳೆಶಿಕೊಳ್ಳುತ್ತದು. ಅದೇ ರೀತಿ ಸಂಕಷ್ಟಂಗಳ ದಾಂಟಿದ ವ್ಯಕ್ತಿಯೇ ಬದುಕಿನ ಮೌಲ್ಯವ ಲಾಯಕಕ್ಕೆ ಅರ್ಥಮಾಡಿಗೊಂಬದು. ಕುಟುಂಬದ ಬೆಂಬಲವೂ ಇಲ್ಲಿ ಮುಖ್ಯ ಆವ್ತು. ಮಕ್ಕೊ ಅಥವಾ ಯುವಕರು ಸೋತಪ್ಪಗ ಅವರ ದೂಷಿಸುವ ಬದಲು ಧೈರ್ಯ ತುಂಬೇಕು. “ನೀನು ಪುನಃ ಪ್ರಯತ್ನಿಸು, ಎಂಗೊ ನಿನ್ನೊಟ್ಟಿಂಗೆ ಇದ್ದೇಯೊ॰” ಹೇಳ್ತ ಒಂದು ಮಾತು ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿದ್ದು. ಸಮಾಜವೂ ಸೋತವರ ಹೀಯಾಳುಸುದಕ್ಕಿಂತ ಪ್ರೋತ್ಸಾಹಿಸುವ ಮನೋಭಾವವ ಬೆಳೆಶಿಗೊಳೇಕು. ನಮ್ಮ ಕನ್ನಡ ಸಾಹಿತ್ಯವೂ ಈ ಸಂದೇಶವ ತುಂಬ ಕಡೆಲಿ ಹೇಳಿದ್ದು. ಕುವೆಂಪು ಅವರ ಸಾಹಿತ್ಯ ಮಾನವನ ಅಂತರಂಗದ ಶಕ್ತಿಯ ಜಾಗೃತಗೊಳಿಸುತ್ತು. ದ.ರಾ. ಬೇಂದ್ರೆಯ ಕಾವ್ಯ ಬದುಕಿನ ಬೇನೆಯನ್ನೂ ಸೌಂದರ್ಯವನ್ನೂ ಸಮಾನವಾಗಿ ಕಾಂಬಲೆ ಕಲಿಶುತ್ತು. ಮಹಾನ್ ಸಾಹಿತಿಗೊ ಎಲ್ಲೋರೂ ಒಂದು ಸತ್ಯವ ಹೇಳುತ್ತವು.. ಎಂತ ಕೇಳಿದರೆ ಬದುಕು ಹೋರಾಟ; ಆದರೆ ಹೋರಾಟಲ್ಲೇ ಸಾರ್ಥಕತೆ ಇದ್ದು ಹೇಳಿ. ಇಂದಿನ ತಂತ್ರಜ್ಞಾನದ ಯುಗಲ್ಲಿ ಎಲ್ಲವೂ ಕ್ಷಣಮಾತ್ರಲ್ಲಿ ಸಿಕ್ಕೆಕು ಹೇಳ್ತ ಮನೋಭಾವ ಬೆಳೆತ್ತಾ ಇದ್ದು. ತಕ್ಷಣದ ಯಶಸ್ಸು ಸಿಕ್ಕದಿದ್ದರೆ ತುಂಬ ಜೆನ ಪ್ರಯತ್ನವನ್ನೇ ನಿಲ್ಲಿಸುತ್ತವು. ಆದರೆ ಪ್ರಕೃತಿಲಿ ಯಾವುದೂ ಒಂದೇ ದಿನಲ್ಲಿ ಬೆಳೆತ್ತಿಲ್ಲೆ. ಬಿತ್ತು ಬಿತ್ತಿದ ತಕ್ಷಣ ಮರ ಆವ್ತಿಲ್ಲೆನ್ನೇ. ಅದಕ್ಕೆ ಸಮಯ, ಸಹನೆ ಮತ್ತು ನಿರಂತರ ಶ್ರಮ ಅಗತ್ಯ. ಮನುಷ್ಯನ ಯಶಸ್ಸಿಂಗೂ ಇದೇ ನಿಯಮ ಅನ್ವಯಿಸುತ್ತು. ಸೋಲಿಂಗೆ ಹೆದರುವ ಸಮಾಜ ಸೃಜನಶೀಲತೆಯ ಕಳಕ್ಕೊಳ್ಳುತ್ತು. ಹೊಸ ಪ್ರಯೋಗ ಮಾಡ್ಳೆ ಧೈರ್ಯ ಇಪ್ಪವು ಮಾಂತ್ರ ಹೊಸ ಆವಿಷ್ಕಾರಂಗಳ ಮಾಡುತ್ತವು. ತಪ್ಪುಗಳ ಮಾಡುಲೆ ಹೆದರದ್ದವೇ ಹೊಸ ದಾರಿಗಳ ನಿರ್ಮಿಸುತ್ತದು. ಹಾಂಗಾಗಿ ಯುವಕರು ಸೋಲಿನ

ಮುಂದೆ ಓದಿ »
Genasale
ಆಹಾರ
ಸರಸ್ವತಿ ಆರ್‌.ಜಿ. ಭಟ್ ಅಂಡಿಂಜೆ

ನಾಗರ ಪಂಚಮಿಗೆ ಮಾಡಿ ಅರಿಶಿನೆಲೆಯ ಗೆಣಸಲೆ

ಅರಿಶಿನವ ನಮ್ಮ ಪೂರ್ವಜರು ಅನಾದಿಕಾಲದಿಂದಲೂ ಅಡುಗೆಲಿ, ಧಾರ್ಮಿಕ ವಿಧಿ ವಿಧಾನಂಗಳಲ್ಲಿ ಮತ್ತೆ ಆಯುರ್ವೇದ ಔಷಧಲ್ಲಿ ಎಲ್ಲಾ ಬಳಸಿಕೊಂಡು ಬಯಿಂದೊವು. ಇದರ ಮದ್ದಿನ ಗುಣ ಹೇಳಿದಷ್ಟು ಮುಗಿಯ. ಅರಿಶಿನ ನಮ್ಮ ಶರೀರಲ್ಲಿ ಆಯಾಂಟಿ ಆಕ್ಸಿಡೆಂಟ್ ಆಗಿ ಕೆಲಸ ಮಾಡ್ತಡ. ಶೀತ ಕಫ ಆಗಿ ಗೊರಗೊರ ಹೇಳಿಯೋಂಡು ಒರಗುಲೇ ಎಡಿಯದ್ದಾಂಗಿಪ್ಪಗ ಒಂದು ಗ್ಲಾಸ್ ತೆಳುವಾದ ಹಾಲಿಂಗೆ ಮನೆಯಲ್ಲಿಯೇ ಮಾಡಿದ ಅರಿಶಿನದ ಹೊಡಿ ಒಂದು ಚಮಚೆ ಹಾಕಿ ಸರಿಯಾಗಿ ಕೊದಿಶಿ ಮತ್ತೆ ಅದರ ಇನ್ನೊಂದು ಗ್ಲಾಸಿಗೆ ಅರಿಶಿ. ಬೆಶಿ ಬೆಶಿ ಇಪ್ಪಗಳೇ ಕುಡಿದು ನೋಡಿ, ಹೇಂಗಾಯಿದು ಹೇಳ್ಳೆ ಮರೆಯೆಡಿ. ಸಣ್ಣ ಪುಟ್ಟ ಕೆಲವು ವಿಷ ಜಂತುಗ ಕೊಂಬಚ್ಚೇಳು, ತಪಸ್ಸಿ… ಇತ್ಯಾದಿ ಕಚ್ಚಿದರೆ ಮನೆಮದ್ದಾಗಿ ಹಸಿ ಅರಿಶಿನವ ತಳದು ಕಿಟ್ಟಿದ್ದರೆ ಉರಿ ಕಮ್ಮಿ ಆವ್ತು. ಮೋರೆಲ್ಲಿ ಚೆಂದದ ಹೊಳಪು ಬರೆಕ್ಕಾದರೂ ಅಪರೂಪಕ್ಕೊಂದರಿ ಅರಿಶಿನ ಕೊಂಬಿನ ಅರದು ಕಿಟ್ಟಿ. ಅರ್ಧ ಘಂಟೆ ಮತ್ತೆ ಮೋರೆ ತೊಳೇರಿ. (ಕೆಲವು ಜನಕ್ಕೆ ಇದು ಆಗದ್ದೆ ಬಪ್ಪದೂ ಇದ್ದು. ಹಾಂಗಾಗಿ ರಜಾ ಜಾಗೆಗೆ ಕಿಟ್ಟಿ ಪ್ರಯೋಗ ಮಾಡಿ ನೋಡಿ ಆತಾ ?) ಸುಮಾರು ಆಯುರ್ವೇದ ಮದ್ದು ತಯಾರಿಕೆಲ್ಲಿ ಅರಿಶಿನದ ಉಪಯೋಗ ಇದ್ದು. ಹುಟ್ಟಿದ ಮಕ್ಕಳ ಹೊಕ್ಕುಳು ಬಳ್ಳಿ ಹುಗಿವಾಗಳೂ ಬೇಕು. ಮದುಮಕ್ಕೊಗೆ ನಾಂದಿ ದಿನ ಕಂಕಣ ಕಟ್ಟುದು ಅರಿಶಿನದ ಕೊಂಬನ್ನೇ. ಹೆಣ ಸುಡುವಾಗಳೂ ಅರಿಶಿನ ಬೇಕು. ಹೀಂಗಿಪ್ಪ ಅರಿಶಿನದ ಎಲೆಯೂ ತುಂಬಾ ಪರಿಮಳ. ಇದರ ಎಲೆಲ್ಲಿ ಮಾಡಿದ ಗೆಣಸಲೆ ತುಂಬಾ ರುಚಿ ಹಾಂಗೂ ಆರೋಗ್ಯ ಪೂರ್ಣ. ನಾಗರ ಪಂಚಮಿ ಗೆ ಇದು ವಿಶೇಷ. ಗೆಣಸಲೆ ಮಾಡುವ ವಿಧಾನ: ಒಂದು ದೊಡ್ಡ ಗ್ಲಾಸ್ ದೋಸೆ ಅಕ್ಕಿಯ ಬೊದುಲುಸಿ ಮಡುಗಿ. ಹತ್ತು ಅರಿಶಿನದ ಎಲೆಗಳ (ತುಂಬಾ ಬೆಳೆದ ಎಲೆ ಬೇಡ) ತಂದು ಲಾಯ್ಕ ಕ್ಕೆ ತೊಳದು ಉದ್ದಿ ಮಡುಗಿ. ಒಂದು ಕಡಿ ತೆಂಗಿನ ಕಾಯಿಯ ಸಣ್ಣ ಸುಳಿ ಬಪ್ಪಹಾಂಗೆ ಕೆರದು ಅದಕ್ಕೆ ಎರಡು ಅಚ್ಚಿನಷ್ಟು ಬೆಲ್ಲ ಸೇರ್ಸಿ ಬಾಣಲೆಲ್ಲಿ ಕರಗುವಷ್ಟು ಬೆಶಿ ಮಾಡಿ. ಅದು ತಣಿಯಲಿ. ಅಷ್ಟಪ್ಪಗ ಬೊದುಲುಸಿದ ಅಕ್ಕಿಯ ರಜ ತೆಂಗಿನಕಾಯಿ ಸೇರ್ಸಿ ನೊಂಪಿಂಗೆ ಚೂರೇ ಚೂರು ಉಪ್ಪು ಸೇರ್ಸಿ ಕಡದು ಇಡ್ಲಿ ಹಿಟ್ಟಿನ ಹದಕ್ಕೆ ಮಾಡಿ ಅರಿಶಿನ ಎಲೆಲಿ ತೆಳ್ಳಂಗೆ ಹರಡಿ. ಮತ್ತೆ ತಾಮುಂದು ಬೆಲ್ಲ ಕಾಯಿ ಸುಳಿಯ ಅದರ ಮೇಲೆ ಹರಡಿ ಎಲೆಯ ಜಾಗ್ರತೆಲಿ ಮಡುಸಿ ಅಟ್ಟಿ ನಳಗೆಲ್ಲಿ ಅರ್ಧ ಗಂಟೆ ಬೇಯಿಸಿ. ರಜ ತಣುದಪ್ಪಗ ಬಿಡುಸಿ ತುಪ್ಪ ಹಾಕಿ ತಿಂದರೆ ಘಮಘಮ ಪರಿಮಳದ ಗೆಣಸಲೆ ಇನ್ನೊಂದರಿ ಮಾಡೆಕ್ಕೋಳಿ ಕಾಣದ್ದಿರ.

ಮುಂದೆ ಓದಿ »
Img 5735
ಆಚಾರ-ವಿಚಾರ
ಮುರಳಿಕೃಷ್ಣ ಕಜೆಹಿತ್ತಿಲು

ಸೋಣೆ ಸಂಕ್ರಾಂತಿಯ ಆಚರಣೆ

ಸೋಣೆ ತಿಂಗಳು ಬಂದಪ್ಪಗ ಗೊಂತಪ್ಪದು ಹೇಂಗೆ ಹೇಳಿರೆ ಹೂಗು ಅಲ್ಲಲ್ಲಿ ಅರಳ್ಯೊಂಡು ಇರ್ತು. ಆದರೆ ಈ ವರ್ಷ ಮಳೆ ಕಮ್ಯಾದ ಕಾರಣ ಆಯ್ಕು.. ಮೊದಲೇ ಹುಟ್ಟಿದ್ದು. ಅಮ್ಮಂದ್ರು ದೇವರ ಮತ್ತು ಚಾವಡಿಯ ಹೊಸ್ತಿಲಿಂಗೆ ರಂಗೋಲಿ ಹಾಕಿ, ಅದಕ್ಕೆ ಹೂಗುಗಳ ಮಡುಗಿ ಎರಡೂ ಕೈಲಿ ಹೊಡಾಡುಗು. ಆದರೆ ಈಗಾಣವು ಎಲ್ಲ ಪೇಟಗೆ ಹೋಗಿ ಕೂದು ಶಾಸ್ತ್ರಂಗ ಎಲ್ಲ ಮರತ್ತೋದಿಕ್ಕು. ಪೇಟೆಯವಕ್ಕೆ ಬೇಳೆ ಆದರೂ ಹಲಸಿನಣ್ಣು ತೆಕ್ಕೊಂಬಗ ಸಿಕ್ಕುತ್ತು. ಬೀಜ ಮಾತ್ರ ಸುಟ್ಟಾಕುಲೆ ಆವ್ತಿಲ್ಲೆ. ಪೇಟೆದರ್ನೇ ಮಡುಗೆಕ್ಕಷ್ಟೆ. ಈಶ್ವರಿಯಕ್ಕ° ಉದಿಯಪ್ಪಗ ಮಿಂದಿಕ್ಕಿ ಬಂದು ದೇವರೊಳಾಣ ಹೊಸ್ತಿಲಿಂಗೂ, ಚಾವಡಿಯ ಹೊಸ್ತಿಲಿಂಗೂ ರಂಗೋಲಿ ಹಾಕಿ, ಹೂಗು ಮಡುಗಿ; ದೇವರಿಂಗೆ ಸುಟ್ಟಾಕಿದ ಬೀಜವನ್ನೂ, ಬೇಳೆಯನ್ನೂ ಮಡುಗಿದವು. ಶಂಕರಣ್ಣ ಆರತಿ ಮಾಡಿ ಎಲ್ಲೋರೂ ಹೊಡಾಡಿದವು. ಬೀಜ, ಬೇಳೆಯ ಎಲ್ಲೋರೂ ಹಂಚ್ಯೊಂಡು ಕುಶಿಲಿ ತಿಂದವು. “ಇದರ ಅಮ್ಮ ಮೊದಲಿಂದಲೇ ಮಾಡ್ಯೊಂಡು ಬತ್ತಾ ಇದ್ದವು. ಎಂಗೊಗೆಲ್ಲ ತುಂಬ ಕುಶಿ. ಬೀಜವೂ, ಬೇಳೆಯೂ ತುಂಬ ಸಿಕ್ಕುತ್ತು ತಿಂಬಲೆ” ಹೇಳಿ ಈಶ್ವರಿಯಕ್ಕನ ಮಗಳು ಅದರ ಗೆಂಡನತ್ರೆ ಹೇಳಿತ್ತು. ಹೀಂಗೆ ಆಟಿ ಅಮವಾಸೆ ಸಮ್ಮಾನವೂ, ಸೋಣೆ ವಿಶೇಷವೂ ಚೆಂದಕೆ ಕಳುದತ್ತು. ನಾಳೆ ಮಗಳು, ಅಳಿಯ° ಬೆಂಗಳೂರಿಂಗೆ ಹೆರಡುತ್ತವು

ಮುಂದೆ ಓದಿ »
Img 5737 1 1
ಆಚಾರ-ವಿಚಾರ
ನಾಗಪ್ಪ ಗಾಂವ್ಕರ್‌ ಗೋಡೆಪಾಲ್

ಪ್ರಕೃತಿ ಆರಾಧನೆಯ ಸಂಕೇತ “ನಾಗರ ಪಂಚಮಿ”

ನಾಗರ ಪಂಚಮಿ ಹೇಳುದು, ಭಾರತೀಯ ಸಂಸ್ಕೃತಿಯ ಪ್ರಮುಖ ಹಬ್ಬಂಗಳಲ್ಲೊಂದು. ಭಾರತೀಯ ಸಂಸ್ಕೃತಿಲಿ ಪ್ರಕೃತಿಯ ಪ್ರತಿಯೊಂದು ಅಂಶವೂ ಪೂಜನೀಯ. ಪಂಚಭೂತಗಳಿಂದ ಹಿಡ್ದು ನದಿ, ವೃಕ್ಷ, ಪರ್ವತ, ಪ್ರಾಣಿ–ಪಕ್ಷಿಗಳವರೆಗೆ ದೈವತ್ವ ಕಾಣು ವಿಶಿಷ್ಟ ಪರಂಪರೆ ಸನಾತನ ಧರ್ಮದ್ದು. ಅಂಥ ಪರಂಪರೆಯ ಪ್ರತೀಕ್ವಾಗಿ ಆಚರ್ಸು ಹಬ್ಬಗಳಲ್ಲಿ ನಾಗರ ಪಂಚಮಿ ಮುಖ್ಯ ಸ್ಥಾನ ಪಡ್ಕಂಡಿದ್ದು. ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿ ದಿನ ಇದ್ನ ಆಚರಣೆ ಮಾಡಾಗ್ತು. ನಾಗದೇವತೆಯ ಆರಾಧನೆಯ ಜೊತೆಗೆ ಪ್ರಕೃತಿ ಸಂರಕ್ಷಣೆ, ಜೀವಜಗತ್ತಿನ ಮೇಲಿನ ಕರುಣೆ ಮತ್ತೆ ಧಾರ್ಮಿಕ ನಂಬಿಕೆಗಳ ಸಮನ್ವಯನ ಈ ಹಬ್ಬ ಸಾರ್ತು. ಪುರಾಣಗಳಲ್ಲಿ ನಾಗದೇವತೆಯ ಮಹತ್ವ ಎಂತದು? ಕೇಳಿರೆ, ಪುರಾಣಗಳಲ್ಲಿ ನಾಗಂಗಳಿಗೆ ವಿಶೇಷ ಸ್ಥಾನ ಇದ್ದು. ಆದಿಶೇಷ ಶ್ರೀಮಹಾವಿಷ್ಣುವಿನ ಹಾಸಿಗೆ. ಪರಮಶಿವನ ಕಂಠದ ಆಭರಣ ನಾಗ, ಗಣಪತಿಯ ಉದರದ ಸುತ್ತಲು ನಾಗಾಭರಣ—ಇವೆಲ್ಲವುವಾ ನಾಗದೇವತೆಯ ದೈವಿಕ ಮಹತ್ವನ ಸಾರ್ತು. ವಿಷ್ಣು ಪುರಾಣದ ಪ್ರಕಾರ, ಕಶ್ಯಪ ಮಹರ್ಷಿಯ ಪತ್ನಿ ಕದ್ರುವಿನ ಸಂತತಿಯೇ ನಾಗವಂಶ. ವಾಸುಕಿ, ತಕ್ಷಕ, ಕರ್ಕೋಟಕ, ಪದ್ಮ, ಮಹಾಪದ್ಮ, ಶಂಖ, ಕುಳಿಕ ಮುಂತಾದ ನಾಗಂಗಳ ಉಲ್ಲೇಖ ಪುರಾಣಗಳಲ್ಲಿ ಸಿಕ್ತು. ಆದಿಶೇಷಂಗೆ “ಅನಂತ” ಹೇಳು ಹೆಸ್ರೂ ಇದ್ದು. ಅವ್ನೆಯಾ ಈ ಇಡೀ ಭೂಮಿಯ ಭಾರ ಹೊತ್ಕಂಡ್‌ ನಿಂತಿದ್ದ ಹೇಳಿ ಪುರಾಣಗಳಲ್ಲಿ ವರ್ಣನೆ ಇದ್ದು. ಶ್ರೀಕೃಷ್ಣನ ಕಾಲಿಯ ಮರ್ಧನ ಶ್ರೀಮದ್ಭಾಗವತ ಮಹಾಪುರಾಣದಲ್ಲಿ ವರ್ಣಿಸಿರ ಕಾಲಿಯ ಮರ್ಧನದ ಪ್ರಸಂಗ ನಾಗರ ಪಂಚಮಿ ಸಂತಿಗೆ ನಿಕಟ ಸಂಬಂಧ ಹೊಂದಿದ್ದು. ಯಮುನಾ ನದಿಯ ನೀರ್ನ ವಿಷಮಯ ಮಾಡ್ದ ಕಾಲಿಯ ಅಹಂಕಾರವ ಬಾಲಕೃಷ್ಣ ತನ್ನ ದಿವ್ಯಲೀಲೆಯಿಂದ ಶಮನ ಮಾಡ್ತಾ. ಕಡೆಗೆ ಕಾಲಿಯ ಪತ್ನಿಯರ ಪ್ರಾರ್ಥನೆ ಮೇರೆಗೆ ಅವಂಗೆ ಜೀವದಾನ ನೀಡಿ ಸಮುದ್ರಕ್ಕೆ ತೆರ್ಳು ಹೇಳಿ ಆಜ್ಞೆ ಮಾಡ್ತಾ. ಈ ಪ್ರಸಂಗ ದುಷ್ಟತನದ ನಾಶ, ಶರಣಾಗತಿಯ ಮಹತ್ವ ಮತ್ತೆ ಪ್ರಕೃತಿಯ ಪ್ರತಿಯೊಂದು ಜೀವಿಯ ಮೇಲೂ ಕರುಣೆ ಇರವು ಹೇಳು ಸಂದೇಶವ ಕೊಡ್ತು. ಜನಮೇಜಯನ ಸರ್ಪಯಾಗ ಮತ್ತು ಆಸ್ತಿಕ ಮುನಿ ಮಹಾಭಾರತದ ಆದಿಪರ್ವದಲ್ಲಿ ರಾಜ ಜನಮೇಜಯ ತನ್‌ ತಂದೆ ಪರೀಕ್ಷಿತನ ಮರಣಕ್ಕೆ ಕಾರಣ ಆದ ತಕ್ಷಕ ನಾಗನ ವಿರುದ್ಧ ಸರ್ಪಯಾಗ ಆರಂಭ ಮಾಡ್ತಾ. ಈ ಯಾಗದ ಪರಿಣಾಮ್ದಿಂದ ನಾಗವಂಶವೇ ವಿನಾಶದ ಅಂಚಿಗೆ ತಲ್ಪಿತ್ತು. ಆಗ ಜರತ್ಕಾರು ಹೇಳು ಋಷಿ ಮಗ ಆಸ್ತಿಕ ಮುನಿ, ಯಾಗ ನಿಲ್ಸಿ ನಾಗಕುಲವ ರಕ್ಷಣೆ ಮಾಡ್ತಾ. ಜೀವಜಗತ್ತಿನ ಸಂರಕ್ಷಣೆ, ಕ್ಷಮೆ ಹಾಂಗೆ ಸಮತೋಲನದ ಸಂದೇಶ ಸಾರು ಈ ಪ್ರಸಂಗ ನಾಗರ ಪಂಚಮಿಯ ಆಚರಣೆಗೆ ಆಧ್ಯಾತ್ಮಿಕ ಹಿನ್ನೆಲೆ ಒದಗಿಸ್ತು. ನಾಗಾರಾಧನೆಯ ತಾತ್ಪರ್ಯನಾಗಾರಾಧನೆ ಬರೀ ಧಾರ್ಮಿಕ ಆಚರಣೆ ಅಲ್ಲ; ಅದು ಪರಿಸರ ಸಂರಕ್ಷಣೆಯ ಸಾಂಸ್ಕೃತಿಕ ಸಂಕೇತ. ಕೃಷಿ ಪ್ರಧಾನ ಸಮಾಜದಲ್ಲಿ ಹಾವು, ಇಲಿಗಳ ಸಂಖ್ಯೆನ ನಿಯಂತ್ರಿಸಿ ಬೆಳೆಯ ರಕ್ಷಣೆ ಮಾಡ್ತು. ಅದ್ಕಾಗೇ ನಾಗಂಗಳನ್ನ ಪ್ರಕೃತಿಯ ಸ್ನೇಹಿತ್ರು ಹೇಳಿ ಗೌರವಿಸು ಸಂಪ್ರದಾಯ ಬೆಳ್ದ್‌ ಬಂದು. ನಾಗರ ಪಂಚಮಿಯ ದಿನ ಭಕ್ತರೆಲ್ಲ ಸೇರ್ಕಂಡು ನಾಗದೇವ್ರಿಗೆ ವಿಶೇಷ ಪೂಜೆ ಸಲ್ಲಿಸ್ತೋ. ಹಾಲು, ಅರಿಶಿನ, ಕುಂಕುಮ, ಹೂವು, ಹಣ್ಣು ಮುಂತಾದ ವಸ್ತುನ ಸಮರ್ಪಿಸಿ ನಾಗದೇವರ ಅನುಗ್ರಹ ಬೇಡ್ತೋ. ಕುಟುಂಬದ ಕ್ಷೇಮ, ಸಂತಾನ ಸೌಭಾಗ್ಯ, ಆರೋಗ್ಯ ಹಾಂಗೆ ಸರ್ಪಭಯ ನಿವಾರಣೆಗೆ ನಾಗಾರಾಧನೆ ಶುಭಕರ ಹೇಳು ನಂಬಿಕೆ ಜನಮಾನಸದಲ್ಲಿ ಬೇರೂರಿದ್ದು. ಇವತ್ತು ಪರಿಸರ ಅಸಮತೋಲನ ಮತ್ತೆ ಜೀವವೈವಿಧ್ಯದಲ್ಲಿ ಕ್ಷೀಣತೆ ಹೆಚ್ತಿದ್ದು. ಇಂಥ ಕಾಲದಲ್ಲಿ ನಾಗರ ಪಂಚಮಿಯ ಸಂದೇಶ ಇನ್ನೂ ಹೆಚ್ಚು ಪ್ರಸ್ತುತ. ನಾಗಗಳು ಪರಿಸರದ ಅವಿಭಾಜ್ಯ ಅಂಗ. ಅವ್ಗಳ್ನ ಸಂರಕ್ಷಣೆ ಮಾಡುದು, ಪ್ರಕೃತಿಲಿ ಸಮತೋಲನ ಕಾಪಾಡ್ಕಂಬುದು ನಂಗ್ಳೆಲ್ರ ಜವಾಬ್ದಾರಿ. ಹಬ್ಬದ ಹೆಸ್ರಲ್ಲಿ ನಮ್‌ ಸುತ್ಮುತ್ಲು ಇಪ್ಪು ಜೀವಜಂತುಗೊಕ್ಕೆ ಹಾನಿ ಮಾಡುದಲ್ಲ; ಅದ್ರ ಅಸ್ತಿತ್ವನ ಗೌರವ್ಸಿ ಸಂರಕ್ಷಿಣೆ ಮಾಡುದೇ ಸನಾತನ ಧರ್ಮದ ನಿಜವಾದ ಆಶಯ. ನಾಗರ ಪಂಚಮಿ ನಮ್ಗೆ ಪ್ರಕೃತಿ ಸಂತಿಗೆ ಸಾಮರಸ್ಯದಿಂದ ಬದುಕು ಪಾಠ ಕಲಿಸ್ತು. ಪುರಾಣಗಳು ಬೋಧಿಸು ಧರ್ಮ, ದಯೆ, ಕರುಣೆ ಮತ್ತೆ ಪರಿಸರ ಸಂರಕ್ಷಣೆಯ ಮೌಲ್ಯಗಳ್ನ ಜೀವನ್ದಲ್ಲಿ ಅಳ್ವಡ್ಸ್‌ಕೊಂಡಾಗ್ಲೆಯಾ ಳವಡಿಸಿಕೊಂಡಾಗಲೇ ಈ ಹಬ್ಬದ ಆಚರಣೆಗೆ ನಿಜವಾದ ಅರ್ಥ ಸಿಕ್ತು. ನಾಗರ ಹಾವೇ, ಮನದೊಳು ಹೂವೆ ಹೇಳಿ ಪದ್ಯ ಇದ್ದು. “ಪ್ರಕೃತಿನ ಪೂಜೆ ಮಾಡು ಸಂಸ್ಕೃತಿನೇ ಭಾರತೀಯ ಸಂಸ್ಕೃತಿ;ನಾಗಾರಾಧನೆಯೇ ಅದರ ಜೀವಂತ ಸಂಕೇತ.”

ಮುಂದೆ ಓದಿ »
havyaka bhashe
ಭಾಷೆ-ಸಾಹಿತ್ಯ
ಗುಣಾಜೆ ರಾಮಚಂದ್ರ ಭಟ್

ನಮ್ಮ ಭಾಷೆ, ಪೀಠ, ದೇಶ

ಹವಿಕ ಭಾಷೆ ಬಹಳ ಚೆಂದಕವಿಗೊ ಬರದ ಪದ್ಯ ಹಲವುಚವಿಯ ಹಣ್ಣಿನಾಂಗೆ ಲಾಯ್ಕ ಹೇಳಿ ನಿಂಗಳೆ |ನವಗೆ ನಮ್ಮ ನುಡಿಗೊ ಚಿನ್ನಅವನ ಇವನ ಅದರಯಿದರಸೀವು ಮಾತು ಎಂದು ಕೇಳಿ ಸುಖಿಗೊ ಎಂಗಳೆ || ಅಮ್ಮ ಹೇಳಿ ಹೇಳ್ವವಲ್ಲನಮ್ಮ ನುಡಿಲಿ ಅಬ್ಬೆ ಹೇಳಿಸುಮ್ಮನಿದ್ದರಾಗ ನಾವು ಭಾಷೆ ಒಳುಶೆಕು |ತಮ್ಮ ತಂಗೆ ಅಕ್ಕ ಅಣ್ಣನಮ್ಮ ಬಂಧ ಗಟ್ಟಿಯಾಗಿಅಮ್ಮಿ ಜಾಯಿ ಹಾಂಗೆ ನಮ್ಮ ನುಡಿಯ ಕೇಳೆಕು || ಬರವೊ ನಾವು ನಮ್ಮ ನುಡಿಲಿವರದ ಹಾಂಗೆ ನಮ್ಮ ಮಾತುಗುರುಗೊ ರಾಮಚಂದ್ರ ಪುರಲಿ ಪೀಠಲಿದ್ದವು |ಶರಣು ಹೋಗಿ ಗುರುಗಳಿಂಗೆಮರವಲಾಗ ನಮ್ಮ ಮಠವವರದ ಕೈಯ ತೋರಿ ನಮ್ಮ ಹರಸಲಿಪ್ಪವು || ನಾವು ಒಟ್ಟು ಆಗಿ ಇರೆಕುಸಾವವರೆಗು ದೇಶಕಾಗಿಸೇವೆ ಮಾಡಿ ಪುಣ್ಯ ಗಳುಸಿ ಧನ್ಯರಾಯೆಕು |ಕಾವ ದೇವ ನಮ್ಮ ಎಲ್ಲಗಾವು ಕಳದು ತಂಪು ತುಂಬಿಕಾವು ಕುಂಬ್ಳೆ ಸೀಮೆ ಚಾಮಿ ನಮ್ಮ ಹರಸೆಕು||

ಮುಂದೆ ಓದಿ »
Img 5724
ಆಹಾರ
ಆಶಾ ರಾಮಚಂದ್ರ ಭಟ್

ಹಲವು ಕೊಡಿಗಳ ಚಟ್ನಿ…

ಆಟಿ ತಿಂಗಳು ಮುಗುಕ್ಕೊಂಡು ಬಂತಿದಾ.. ನಿಂಗೊ ಹಲವು ಕೊಡಿಯ ಚಟ್ನಿಯೋ ತಂಬುಳಿಯೋ ಮಾಡಿ ಉಂಡಿರೋ ಇಲ್ಯೊ.. ಆಟಿ ತಿಂಗಳಿಲಿ ಎಲ್ಲಾ ಸೊಪ್ಪುಗಳಲ್ಲೂ ಒಂದೊಂದು ವಿಧದ ಮದ್ದಿನ ಗುಣ ಇರ್ತು ಹೇಳ್ತದು ಹಿಂದಿಂದಲೂ ಬಂದ ಪ್ರತೀತಿ..ಹಾಂಗಾಗಿ ಎಂಗೊ ಸಣ್ಣ ಇಪ್ಪಗ ಅಜ್ಜಿ ಹೇಳಿಗೊಂಡು ಇತ್ತಿದ್ದವು..ಹೀಂಗೇ ಜಾಲ ಕರೇಲಿ ತಿರುಗಿ ಸಿಕ್ಕಿದ ಸೊಪ್ಪು ಹಾಕಿದ್ದೆ ಆ ಇಂದೂ.. ನಿಂಗೊಗೇ ಗುಡ್ಡೆ ಇದ್ದರೆ ಅಲ್ಲಿಯೂ ತಿರುಗಿ ಎಲ್ಲಾ ನಮೂನೆ ಸೊಪ್ಪು ಕೊಡಿ ಚುಂಟಿ ತಪ್ಪಲಕ್ಕು. ಪೇರಳೆ ಕೊಡಿ, ಶಂಖ ಪುಷ್ಪ ಗಿಡದ ಚಿಗುರು, ತೊಂಡೆ ಚಿಗುರು, ನೆಲ ನೆಲ್ಲಿ, ನೆಲ ಬಸಳೆ, ಕಾಡು ಬಸಳೆ, ನಿಂಬೆ ಹುಳಿ ಸೊಪ್ಪಿನ ಕೊಡಿ, ಒಂದೆಲಗ, ಎಲಿಕೆಮಿ, ಕಿಸ್ಕಾರ ಚಿಗುರು, ಅಶೋಕ, ಗರಿಕ್ಕೆ, ತೊಳಸಿ, ಅರಿಶಿನ ಎಲೆ, ನೈಕಬ್ಬು ಕೊಡಿ, ಮಾವಿನ ಚಿಗುರು , ಬೀಜದ ಚಿಗುರು, ಚೀ ಮುಳ್ಳಿನ ಚಿಗುರು, ಪುನರ್ಪುಳಿ ಚಿಗುರು, ಗಾಂಧಾರಿ ಮೆಣಸು ಸಮೇತ ಚಿಗುರು, ಮಲ್ಲಿಗೆ ಗಿಡದ ಚಿಗುರು, ಪಾರಿಜಾತದ ಚಿಗುರು, ದಾಸವಾಳದ ಚಿಗುರು, ಬೇನ್ಸೊಪ್ಪಿನ ಚಿಗುರು, ದಾಲ್ಚಿನಿ ಚಿಗುರು, ಸಾಂಬ್ರಾಣಿ ಕೊಡಿ ಹೀಂಗೇ 27-28 ನಮೂನೆ ಎಲೆ ಕೊಯಿದು ಲಾಯಿಕ ತೊಳದು ಸಣ್ಣ ತುಂಡು ಮಾಡಿ ಮಡುಗಿ. ಬಾಣಲೆಗೆ 2 ಚಮಚ ತುಪ್ಪ ಹಾಕಿ 1/2 ಚಮಚ ಜೀರಿಗೆ ಚಟ ಪಟ ಹೇಳ್ಸಿ , ಬೇಕಾರೆ ಸಣ್ಣ ಕೊರದ ಅರ್ಧ ನೀರುಳ್ಳಿ + 10 ಎಸಳು ಬೆಳ್ಳುಳ್ಳಿದೇ (ಒಪ್ಷನಲ್ ) ಹಾಕಿ ಒಂದು ನಿಮಿಷ ಹೊರುದು ಕೊಚ್ಚಿದ ಎಲ್ಲಾ ಸೊಪ್ಪನ್ನು ಅದಕ್ಕೆ ಹಾಕಿ ದೊಡ್ಡ ಕಿಚ್ಚಿಲಿ ಎರಡು ಮೂರು ನಿಮಿಷ ಹೊರುದು ತಣುದ ಮೇಲೆ 1 ಕಾಯಿಯ ಸುಳಿ, ಸಣ್ಣ ತುಂಡು ಬೆಲ್ಲ, ಉಪ್ಪು ಹಾಕಿ ಅರ್ಧ ಗ್ಲಾಸ್ ನೀರು ಹಾಕಿ ತರಿ ತರಿ ಕಡದು ಒಂದು ತಪಲೆಗೇ ಹಾಕಿ.. ಸೌಟಿಂಗೆ ತುಪ್ಪ, ಸಾಸಮೆ, ಬೆಳ್ಳುಳ್ಳಿ ಸೇರ್ಸಿ ಒಂದು ಒಗ್ಗರಣೆ ಹಾಕಿರೇ ರುಚಿಯಾದ ಹಲವು ಕೊಡಿ ಚಟ್ನಿ ರೆಡಿ.. ಗಂಜೀದೆ ಚಟ್ನಿದೇ ಹಾಕಿ ಉಂಬಲೇ 👌🏼👌🏼ವರ್ಷಕ್ಕೆ ಒಂದರಿ ಆದ್ರೂ ಇದರ ಉಣ್ಣೆಕ್ಕು ಹೇಳ್ತವು ಹಿರಿಯರು… ವಿ. ಸೂ : ಇದರ ಹೊರಿಯದ್ದೆ ಹಸಿಯೂ ಮಾಡ್ಲೆ ಆವುತ್ತು..ಚಟ್ನಿ ಬೇಡಾಳಿರೆ 2 ಗ್ಲಾಸ್ ಮಜ್ಜಿಗೆ ಸೇರ್ಸಿ ತಂಬುಳಿ ಹಾಂಗೂ ಉಂಬಲೇ 👌🏼👌🏼

ಮುಂದೆ ಓದಿ »
Gade Gadduge
ಅಂಕಣ
ರುಕ್ಮಿಣಿಮಾಲಾ

ಗಾದೆಯ ಗದ್ದುಗೆ: ‘ಆಯ್ಕೊಂಡಿಪ್ಪ ಕೋಳಿಯ ಕಾಲು ಮುರುದಾಂಗೆ’

ಸಿದ್ದಮ್ಮ ಒಂದು ದೊಣ್ಣಗೆ ಕತ್ತಿಯ ಸಿಕ್ಕುಸಿ ಮನೆಯ ಹಿಂದೆ ಮುಂದೆ ಬೆಳಕ್ಕೊಂಡಿದ್ದ ಹುಲ್ಲಿನ ಕೊಚ್ಚುತ್ತ ಇತ್ತು. ಅದರ ನೋಡಿ ಎನಗೆ ಆಶ್ಚರ್ಯ ಆತು. ಯಾವುದೇ ಕೆಲಸವನ್ನಾದರೂ ಅಷ್ಟೆ, ಹೇಳದ್ದರೆ ಒಂದು ಹುಲ್ಲುಕಡ್ಡಿಯನ್ನೂ ಅತ್ತ ಮಡುಗದ್ದ ಸಿದ್ದಮ್ಮ ಇಂದು ಇದ್ದಕ್ಕಿದ್ದ ಹಾಂಗೆ ಈ ಕೆಲಸಕ್ಕೆ ಕೈ ಹಾಕಿದ್ದಲ್ಲದ. ಹೇಳಿ ಆಶ್ಚರ್ಯಂದ, “ಎಂತ ಇಂದು ಯಾವ ಹೊಡೆಂದ ಎದ್ದು ಬಂದದು? ಇದೆಂತ ಈ ಕೆಲಸ ಇಂದು ಮಾಡುತ್ತ ಇದ್ದೆ”?” ಹೇಳಿ ಕೇಳಿದೆ. “ನೋಡಿ ಹೇಂಗೆ ಹುಲ್ಲು ಬೆಳದ್ದು. ಹಾವುಗೀವು ಸೇರಿಕೊಂಡರೆ ಗತಿ ಎಂತ? ನಿಂಗೊ ಬೇರೆ ಎಲ್ಲೆಂದರಲ್ಲಿ ಬರೀ ಕಾಲಿಲಿ ನುಗ್ಗುತ್ತೀರಿ ಎನ್ನ ಹಾಂಗೇ. ಇಲ್ಲಿ ಹಾವು ಸೇರಿಕೊಂಡರೆ ಗೊಂತೇ ಆಗಾ. ಅದೆಲ್ಲಾದರೂ ಕಚ್ಚಿದರೆ `ಆಯ್ಕೊಂಡಿಪ್ಪ ಕೋಳಿಯ ಕಾಲು ಮುರುದಾಂಗೆ ‘ ಎನ್ನ ಸ್ಥಿತಿ ಅಕ್ಕು. ಎನಗೆ ಇಪ್ಪದು ಒಬ್ಬ ಮಗ. ಮುಂಡೇದು ಪಾಪದ್ದು ಬೇರೆ. ಮೂಕನಾಂಗೆ ಇರ್ತ. ಮನೆ ಸಾಲ ಬೇರೆ ಸಿಕ್ಕಾಪಟ್ಟೆ ಇದ್ದು. ಸಾಲ ತೀರ್ಸಿ, ಮಗನ ಬಾಳಿನ ನೇರ್ಪು ಮಾಡಿದ ಮೇಲೆ ಬೇಕಾದರೆ ಆನು ಸತ್ತರೆ ತೊಂದರೆ ಇಲ್ಲೆ. ಇಲ್ಲಿ ಹಿಂದೆ ಮುಂದೆ ಮುಂಗುಸಿ ಓಡಾಡುತ್ತ ಇರ್ತು. ಹುಶಾರಾಗಿ ಇರೆಕ್ಕು ಹೇಳಿ ಹಿಂದಿನ ಮನೆಯೋರು ಹೇಳಿದ್ದವು. ನಿಂಗಳೂ ಮೊನ್ನೆ ಮುಂಗುಸಿ ಓಡಾಡುದರ ಕಂಡಿದೆ ಹೇಳಿ ಹೇಳಿತ್ತಿದ್ದಿ. ಮುಂಗುಸಿ ಬಪ್ಪದೇ ಹಾವು ಇದ್ದರೆ ಅಲ್ಲದೊ? ಹಾವು ಇಲ್ಲಿ ಬಾರದ್ದ ಹಾಂಗೆ ಹುಲ್ಲಿನ ತೆಗೆತ್ತ ಇದ್ದೆ. ಅದಕ್ಕೆ ಉದ್ದ ದೊಣ್ಣೆ ತೆಕ್ಕೊಂಡದು” ಹೇಳಿ ಅದರ ಈ ಕೆಲಸದ ಕಾರಣವ ವಿವರಿಸಿತ್ತು! “ಇಷ್ಟು ವರ್ಷ ಹೀಂಗೆ ಹುಲ್ಲು ಬೆಳದಿಪ್ಪಾಗ ನಿನಗೆ ಹಾವು, ಚೇಳಿನ ಹೆದರಿಕೆ ಇತ್ತಿಲ್ಲೆ. ಈಗ ಇದ್ದಕ್ಕಿದ್ದ ಹಾಂಗೆ ಹಾವಿನ ಹೆದರಿಕೆ ಹೇಂಗೆ ಬಂತು” ಕೇಳಿದೆ. ‘ಅದಾ, ಅದಕ್ಕೆ ಕಾರಣ ಇದ್ದು. ನಿನ್ನೆ ಒಂದು ಮನೆಲಿ ರಂಗೋಲಿ ಹಾಕುಲೆ ಆ ಜಾಗೆಯ ತಿಳವಲೇಳಿ ನೀರಿಂಗೆ ಸಂಪಿನ ಮುಚ್ಚಳ ತೆಗೆವಗ, ನಾಗರಹಾವಿನ ಮರಿ ಆಟ ಆಡಿಗೊಂಡಿತ್ತು. ಹೆದರಿ ಕೂಡಲೇ ಮುಚ್ಚಳ ಹಾಕಿ ಬಿಟ್ಟೆ. ಮನೆಯೋರಿಂಗೆ ವಿಷಯ ಹೇಳಿದರೂ ನಂಬುತ್ತವೇ ಇಲ್ಲೆ. ಸಂಪು ಮುಚ್ಚೆಲಿನ ತೆಗದು ನೋಡುವವರಗೆ ಆನು ಬಿಟ್ಟಿದಿಲ್ಲೆ. ಮತ್ತೆ ಹಾವು ಹಿಡಿಯೋನಿಂಗೆ ಫೋನ್ ಮಾಡಿದವು. ಹಾವು ಹಿಡುದು ತೆಗದ ಮತ್ತೆ ಸಂಪಿನ ನೀರು ಖಾಲಿ ಮಾಡಿ ತಾರಸಿ ಮೇಲಿಪ್ಪ ಟ್ಯಾಂಕ್ ನೀರನ್ನೂ ಖಾಲಿ ಮಾಡಿಸಿದವು. ಅವರ ಮನೆ ಮಹಡಿಲೂ ಒಂದು ಸಂಸಾರ ಬಾಡಿಗೆಗೆ ಇದ್ದು. ಇಂದು ಅಡುಗೆ ಮಾಡಿದ್ದರ ಉಣ್ಣೆಡಿ ಹೇಳಿ ಅವಕ್ಕೂ ಹೇಳಿ ಬಂದೆ. ನೀರಿಲಿ ಹಾವು ಇದ್ದಮೇಲೆ ಆ ನೀರಿನ ಉಪಯೋಗಿಸುದು ಅಪಾಯ. ಬಟಾಟಗೆ ಬದನೆಕಾಯಿ ಹಾಕಿ ಗಟ್ಟಿ ಹುಳಿ ಮಾಡಿತ್ತಿದ್ದವು. ಎಲ್ಲ ಚೆಲ್ಲಿಸಿಬಿಟ್ಟೆ. ಎಷ್ಟು ಲಾಯಕ ಮಂದವಾಗಿ ಇತ್ತೂ ಹೇಳಿರೆ, ಚೆಲ್ಲುವಗ ಎನಗೇ ಹೊಟ್ಟೆ ಉರುದೇ ಹೋತು. ಆದರೂ ಬೇರೆ ಯೋಚನೆ ಮಾಡದ್ದೆ ಚೆಲ್ಲಿಸಿದೆ. ಮತ್ತೆ ಅವು ದೋಸೆ ಮಾಡಿ ತಿಂದವು” ಹೇಳಿ ನಡದ ಘಟನೆಯ ವಿವರಿಸಿತ್ತು. “ಅದೇ ನೀರು ಹಾಕಿ ಹಿಟ್ಟು ಮಾಡಿ ಆ ದೋಸೆ ಮಾಡಿದ್ದಲ್ಲದ? ಅದರ ತಿಂಬಲಕ್ಕ?” ಹೇಳಿ ಕಿಲಾಡಿ ಪ್ರಶ್ನೆ ಕೇಳಿದೆ. “ಅದೆಂತ ತೊಂದರೆ ಇಲ್ಲೆ. ಹಿಟ್ಟು ನಿನ್ನೆ ಮಾಡಿದ್ದು. ಇಂದಲ್ಲದ ಹಾವು ಇದ್ದದು” ಹೇಳಿ ಸಮಜಾಯಿಸಿ ಕೊಟ್ಟತ್ತು! ‘ನಮ್ಮ ಮನೆಯ ಸಂಪಿನ ಮುಚ್ಚಳ ತೆರದು ನೋಡೆಕ್ಕು. ಎಲ್ಲಾದರೂ ಹಾವು ಸೇರಿಕೊಂಡರೆ ಅಪಾಯ. ಪೈಪಿಲಿ ಬಪ್ಪ ನೀರಿನೊಟ್ಟಿಂಗೆ ಹಾವು ಬಪ್ಪದಡೊ. ನಿಂಗಳ ಅಣ್ಣನ ಮನೆ ಸಂಪಿಲೂ ನೋಡುಲೆ ಹೇಳಿ. ಅವರ ಮನೆ ಸಂಪಿನ ಸುತ್ತ ಹುಲ್ಲು ಬೆಳಕ್ಕೊಂಡಿದ್ದು. ಅಲ್ಲಿ ಎಲ್ಲ ಕ್ಲೀನ್ ಮಾಡ್ಸಿ ಸಿಮೆಂಟು ಹಾಕ್ಸುಲೆ ಹೇಳಿ. ಬೇಕಾರೆ ಆನು ಹೇಳಿದ್ದು ಹೇಳಿಯೇ ಹೇಳಿ.. ಬೈದರೆ ಬೈಸಿಕೊಳ್ತೆ ” ಹೇಳಿತ್ತು! ಆ ದಿನ ಸುಮ್ಮನೆ ಇತ್ತಿದ್ದೆ. ಸಿದ್ದಮ್ಮ ಹೇಳಿದ್ದಕ್ಕೆ ತಲೆಕೆಡಿಸಿಕೊಂಬಲೆ ಹೋಯಿದಿಲ್ಲೆ. ಆದರೆ ಇರುಳು ಎಲ್ಲ ಅದೇ ಯೋಚನೆ. ನಮ್ಮ ಮನೆಯ ಸಂಪಿನೊಳ ಹಾವು ಇದ್ದಾಂಗೆ ಕನಸು! ಈ ಗೊಂದಲ ನಿವಾರಣಗೆ ಸಂಪು ಮುಚ್ಚಳವ ತೆರದು ನೋಡುದೇ ಮದ್ದು ಹೇಳಿ ಉದಿಯಪ್ಪಗ ಎದ್ದಾಂಗೇ ಧೈರ್ಯ ಮಾಡಿ ಸಂಪಿನ ಮುಚ್ಚಳ ತೆರದು ನೋಡಿದೆ. ಹಾವು ಎಲ್ಲಿಯೂ ಕಂಡಿದಿಲ್ಲೆ. ಸಿದ್ದಮ್ಮ ಬಂದಪ್ಪಗ ಹೇಳಿದೆ ಹಾವು ಇತ್ತಲ್ಲೇಳಿ. ಎನ್ನ ಮಾತಿಲಿ ನಂಬಿಕೆ ಇಲ್ಲದ್ದೆ, ಸಂಪಿನ ಮುಚ್ಚಳ ತೆರದು ಟಾರ್ಚ್ ಹಾಕಿ ಕೂಲಂಕಷವಾಗಿ ನೋಡಿಯೇ ಹಾವು ಇಲ್ಲೇಳಿ ಖಾತ್ರಿ ಮಾಡಿಕೊಂಡತ್ತು!

ಮುಂದೆ ಓದಿ »
Yoga Relationship
ಆರೋಗ್ಯ
ಡಾ ಅನಂತ ಕೃಷ್ಣ ಬಿ ಎಸ್

ಸಂಬಂಧ – ನಮ್ಮ ಒಳಾಣ ಮನ್ನಸ್ಸಿನ ತೋರುಸುವ ಯೋಗದ ಕನ್ನಡಿ

ನವಗೆ ಯೋಗ ಹೇಳಿರೆ ಎಂತ ಹೇಳಿ ಗೊಂತಿದ್ದು. ಮನಸ್ಸು ಹೇಳುದು ಯೋಗದ ಅಂಶಲ್ಲಿ ಮಹತ್ವದ ಸ್ಥಾನ ಪಡೆತ್ತು. ಯೋಗ ಗ್ರಂಥಲಿ ಮನಃ ಪ್ರಶಮನೋಪಾಯೋ ಯೋಗ ಇತ್ಯಭಿಧೀಯತೇ ಹೇಳಿ ಹೇಳಿದ್ದವು. ಹೇಳಿರೆ, ಮನಸ್ಸಿನ ಶಾಂತ ಮಾಡುವ ಸಾಧನವೇ ಯೋಗ ಹೇಳಿ. ಹಾಂಗಾರೆ ನಾವು ನಮ್ಮವರ ಒಟ್ಟಿಗೆ ಶಾಂತಿಯಾಗಿ ಇಲ್ಲದ್ರೆ ಯೋಗ ಹೇಳುವ ಮನಸ್ಸಿನ ಸಂಬಂಧ ಮತ್ತು ಯೋಗದ ತತ್ವ ಎಲ್ಲಿದ್ದು? ಅದಕ್ಕೆ ಹಿರಿಯರು ಹೇಳಿದ್ದವು ಸಂಬಂಧ ಹೇಳುದು ಹೆರ ಇಪ್ಪದಲ್ಲ; ಅದು ನಮ್ಮ ಒಳ ಇಪ್ಪದು. ನಾವು ಸಂಬಂಧ ಹೇಳಿದ ಕೂಡ್ಲೇ ಹೆರಾಣ ವಿಚಾರ ಹೇಳಿ ಯೋಚನೆ ಮಾಡ್ತು. ಇವು ನಮ್ಮವು, ಇದು ನಮ್ಮ ಮನೆ, ನಮ್ಮ ಜನಂಗ ಹೇಳಿ ಇಪ್ಪ ಆಲೋಚನೆ ಬತ್ತು. ಆದ್ರೆ ಸ್ವಲ್ಪ ಒಳಾಂಗೆ ಹೋಗಿ ಈ ವಿಚಾರವ ವಿಮರ್ಶೆ ಮಾಡಿರೆ ಸಂಬಂಧ ಹೇಳುದು ವ್ಯಕ್ತಿ ಅಥವಾ ವಸ್ತು ಅಲ್ಲ ಹೇಳುದು ಅರ್ಥ ಅಕ್ಕಷ್ಟೆ. ನಿಜವಾದ ಸಂಬಂಧ ಯಾವುದು ಹೇಳಿರೆ ಅವರ ಬಗ್ಗೆ ನಮ್ಮ ಒಳ ಅಪ್ಪ ಅನುಭವ. ಇದರ ಹೆಂಗೆ ಅರ್ಥ ಮಾಡ್ಲಕ್ಕು ಹೇಳಿರೆ, ಈಗ ಒಬ್ಬ ಒಂದು ಮಾತು ಹೇಳಿರೆ ಅದು ಎದುರು ಇಪ್ಪ ವ್ಯಕ್ತಿಗಳಲ್ಲಿ ಒಬ್ಬಂಗೆ ಮನಸ್ಸಿಗೆ ಬೇನೆ ಅಪ್ಪಲೂ ಸಾಕು. ಆದರೆ, ಅದೇ ಮಾತು ಇನ್ನೊಬ್ಬಂಗೆ ಏನೂ ವ್ಯತ್ಯಾಸ ಅಥವಾ ಮನಸ್ಸಿಗೆ ಕಷ್ಟ ಹೇಳಿ ಅನುಸದ್ದೆ ಇಕ್ಕು. ಹಾಂಗಾರೆ, ಈ ಮನಸ್ಸಿಗೆ ಬೇನೆ ಎಲ್ಲಿಂದ ಆತು? ಅದು ಹೆರಾಣ ಅನುಭವ ಅಲ್ಲ; ಬದಲಾಗಿ ಅದು ಮನಸ್ಸಿನ ಒಳಾಣ ಅನುಭವ. ಇದನ್ನೇ ಪತಂಜಲಿ ಮಹರ್ಷಿ ಯೋಗ ಸೂತ್ರಲ್ಲಿ ಸುಲಭಕ್ಕೆ ಅರ್ಥ ಅಪ್ಪ ರೀತಿಲಿ ಹೇಳಿದ್ದು: ಯೋಗಶ್ಚಿತ್ತವೃತ್ತಿನಿರೋಧಃ ॥ (ಯೋಗಸೂತ್ರ 1.2) ಮನಸ್ಸಿನಲ್ಲಿ ಉದ್ಭವಿಸುವ ಚಂಚಲತೆಗಳ ನಿಯಂತ್ರಿಸಿ, ಸ್ಥಿರಗೊಳಿಸುದೇ ಯೋಗ. ಸಂಬಂಧಗಳಲ್ಲಿ ನಾವು ಇದರ ಮರೆತ್ತು. ಈ ವಿಚಾರಲ್ಲಿ ಮನಸ್ಸಿಗೆ ನಿಜವಾದ ಪರೀಕ್ಷೆ ಯಾವುದು ಹೇಳಿರೆ ನಾವು ಹೆರ ಪ್ರಪಂಚಲ್ಲಿ ವ್ಯಾವಹಾರಿಕವಾಗಿ ಎಲ್ಲರ ಒಟ್ಟಿಗೆ ಲಾಯ್ಕಲ್ಲಿ ಇರ್ತು. ಅದುವೇ ನಮ್ಮ ನಿಜವಾದ ಮನಸ್ಸು ನಮ್ಮ ಮನೆಯವರ ಒಟ್ಟಿಗೆ ಹೆಂಗೆ ಇರ್ತು ಹೇಳಿ ಮುಖ್ಯ ಆವ್ತು. ಅಲ್ಲಿ ನಾವು ಯಾವುದನ್ನೂ ನಿಯಂತ್ರಣಲ್ಲಿ ಇಟ್ಟುಕೊಂಬಲೆ ಕಷ್ಟ ಆವ್ತು. ನಮ್ಮ ಮನೆಯವರ ಒಂದು ಮಾತು, ಅಪ್ಪ ಅಮ್ಮನ ಮೌನ, ಮಕ್ಕಳ ಒಂದು ನಡೆ ನಮ್ಮೊಳ ಎಂತದೋ ಒಂದು ಬದಲಾವಣೆ ಎಬ್ಬಿಸಿ ನಿಯಂತ್ರಣ ತಪ್ಪುತ್ತು ಮನಸ್ಸು. ಇಲ್ಲಿ ನಾವು ವ್ಯಾವಹಾರಿಕ ರೀತಿಲಿ ನಮ್ಮ ಮನಸ್ಸಿನ ಭಾವನೆ ತೋರುಸುತ್ತಿಲೆ, ಇದುವೇ ನಿಜವಾದ ಮನಸ್ಸಿನ ಬಣ್ಣ. ಹಾಂಗಾರೆ ಸಂಬಂಧ ಹೇಳುದು ಎಂತರ? ಸಂಬಂಧ = ಆತ್ಮಪರಿಶೀಲನೆ ನಾವು ಧ್ಯಾನಕ್ಕೆ ಕೂತು ನಮ್ಮ ಮನಸ್ಸಿನ ಅರ್ಥ ಮಾಡ್ಲೆ ಅಥವಾ ನಿಯಂತ್ರಣ ಮಾಡ್ಲೆ ಪ್ರಯತ್ನ ಮಾಡ್ತು. ಆದ್ರೆ ನಿಜವಾಗಿಯೂ ನಮ್ಮ ಬಗ್ಗೆ ನಮ್ಮ ಮನಸ್ಸಿನ ಬಗ್ಗೆ ಹೆಚ್ಚು ಅರ್ಥ ಮಾಡುಸುದು ನಮ್ಮ ಹತ್ರಾಣ ಸಂಬಂಧ. ಎಂತಕೆ ಹೇಳಿರೆ, ಅಲ್ಲಿ ನಿಜವಾದ ನಮ್ಮ ಸ್ವಭಾವ ಹೆರ ಬಪ್ಪದು. ಅಲ್ಲಿ ಕೋಪ, ಅಸಹನೆ, ಹಿಡಿತ, ನಿರೀಕ್ಷೆ, ಕಳಕೊಂಬ ಭಯ ಎಲ್ಲಾ ಕಾಣ್ತು. ಇದು ಹೆರಾಣ ಜನಂಗಳ ಹತ್ರ ಅಷ್ಟು ಸ್ಪಷ್ಟ ಆಗ. ಅದೇ ಕಾರಣಂದ ನಮ್ಮ ಹತ್ರಾಣವೇ ನವಗೆ ಗುರು ಆವುತ್ತವು. ಅವು ಹೊಸತ್ತು ಎಂತನ್ನು ಹೇಳಿಕೊಡ್ತವಿಲ್ಲೆ ಆದ್ರೆ ನಮ್ಮ ಒಳ ಇಪ್ಪದರ ತೋರ್ಸಿ ಕೊಡ್ತವು. ಮನಸ್ಸಿನ ಕಥೆ — ಸಂಬಂಧದ ಗೊಂದಲ ಒಬ್ಬ ನಮ್ಮ ಯೋಚನೆ ಪ್ರಕಾರ ಇಲ್ಲದ್ದ ಕೂಡ್ಲೇ ನಾವು ಅವ ಬದಲಾಯ್ದ, ನಮ್ಮ ಮರ್ತಿದ… ಹೀಂಗೆ ನವಗೆ ಬೇಕಾದ ವ್ಯಾಖ್ಯಾನ ಮಾಡಿಕೊಳ್ತು. ಆದ್ರೆ ನಿಜ ಎಂತರ ಹೇಳಿ ಯೋಚನೆ ಮಾಡ್ತಿಲ್ಲೆ. ಆ ಕಥೆಗೆ ನವಗೆ ನಾವೇ ಪ್ರತಿಕ್ರಿಯೆ ಮಾಡಿಕೊಳ್ತು. ಸಂಬಂಧ ಗೊಂದಲ ಅಪ್ಪದೇ ಇಲ್ಲಿಂದ. ವಿರಾಮ — ಯೋಗದ ಸಣ್ಣ ದಾರಿ ಆರಾರು ಮಾತಾಡಿ ಅಪ್ಪಗ ನಾವು ಕೆಲವು ಸರ್ತಿ ತಕ್ಷಣ ಪ್ರತಿಕ್ರಿಯೆ ಕೊಡ್ತು. ಆ ಎರಡು ಕ್ಷಣದ ನಡುಕೆ ಒಂದು ಸಣ್ಣ ವಿರಾಮ ಕೊಡ್ಲೆ ಎಡಿಗಾ? ಒಂದು ದೀರ್ಘ ಉಸಿರಾಟ ಮಾಡ್ಲೆ ಎಡಿಗಾ? ಹೀಂಗೆ ಮಾಡಿರೆ ಎಂತ ಆವ್ತು ಹೇಳಿ ಗೊಂತಿದ್ದಾ? ಕೋಪ ಸ್ವಲ್ಪ ಕಮ್ಮಿ ಅಪ್ಪಲೂ ಸಾಕು, ಮಾತು ಸ್ವಲ್ಪ ಮೃದು ಅಕ್ಕು, ಮನಸ್ಸು ವಿಚಾರವ ಅರ್ಥ ಮಾಡಿಗೊಂಬ ಸಮಯ ಸಿಕ್ಕುತ್ತು. ಇದನ್ನೇ ಯೋಗ ಶಾಸ್ತ್ರದ ರೀತಿಲಿ ಹೀಂಗೆ ಹೇಳುಲೆ ಎಡಿಗು. ಅಭ್ಯಾಸವೈರಾಗ್ಯಾಭ್ಯಾಂ ತನ್ನಿರೋಧಃ ॥ ಹೇಳಿರೆ ನಿರಂತರ ಅಭ್ಯಾಸ ಮತ್ತು ವೈರಾಗ್ಯಂದ ಮನಸ್ಸಿನ ಚಡಪಡಿಕೆ ಶಾಂತ ಆವ್ತು. ಆ ಒಂದು ಕ್ಷಣದ ವಿರಾಮ- ಅದುವೇ ಸಣ್ಣ ಅಭ್ಯಾಸ. ನಿರೀಕ್ಷೆ — ಕಾಣದ ಒತ್ತಡ ನಾವು ಎಷ್ಟೋ ವಿಷಯವ ಹೇಳ್ತಿಲ್ಲೆ ಆದರೆ ಅದು ನಮ್ಮೊಳ ಇರ್ತು. ಅವ ಹೀಂಗೆ ಮಾಡೆಕ್ಕಾತು, ಅದು ಹೀಂಗೆ ಮಾತಾಡೇಕ್ಕಾತು ಹೇಳಿ ನಮ್ಮೊಳಾಣ ವಿಮರ್ಶೆ. ಈ ನಿರೀಕ್ಷೆ ಮನಸ್ಸಿಗೆ ಭಾರ. ಯೋಗ ಈ ವಿಚಾರಕ್ಕೆ ಎಂತ ಹೇಳ್ತು ಹೇಳಿರೆ ಹೀಂಗೆ ಯೋಚನೆ ಮಾಡುದು ಬಿಡು ಹೇಳಿ ಅಲ್ಲ, ಬದಲಾಗಿ ಮೊದಲು ಗಮನಿಸು, ನಂತರ ಹೇಳು ಹೇಳಿ. ಯೋಗದ ರೀತಿಲಿ ಮನಸ್ಸಿನ ನಿಯಂತ್ರಣ ಹೇಳಿರೆ ಸಂಬಂಧವ ಬಿಟ್ಟು ಹೋಗು ಹೇಳಿ ಅಲ್ಲ. ನಿಜವಾದ ಯೋಗ ಹೇಳಿರೆ ಸಂಬಂಧಗಳ ಒಟ್ಟಿಗೆ ಇದ್ದೇ ನಮ್ಮ ಮನಸ್ಸಿನ ಅರ್ಥ ಮಾಡಿಕೊಂಬದು. ನಾವು ಯೋಗವ ಶಾಂತಿ ಹುಡುಕುವ ವಿಧಾನ ಹೇಳಿ ಗ್ರೇಶುತ್ತು. ಆದರೆ ಯೋಗ ಇನ್ನೊಂದು ದಾರಿ ತೋರ್ಸುತ್ತು. ಶಾಂತಿಯ ಹುಡುಕ್ಕೆಡಿ ನಿಂಗಳ ಅಶಾಂತಿಯ ಗಮನಿಸಿ ಹೇಳಿ.  ಅದು ಎಲ್ಲಿ ಜಾಸ್ತಿ ಸ್ಪಷ್ಟ ಕಾಣ್ತು

ಮುಂದೆ ಓದಿ »
Img 5708
ಇತರೆ
ಅರುಣಾ ಜಿ. ಭಟ್ ಬದಿಕೋಡಿ

ಸೈನಿಕರಾಗಿದ್ದ ಡುಮ್ಮಜ್ಜನ ಶುದ್ದಿ

ಯಾವಗಾಣ ಹಾಂಗೇ ಒಂದು “ಹಳೇ ಶುದ್ದಿ” ಯ ಮಾರಾಪು ತೆಕ್ಕೊಂಡು ಬಂದೆ. ಮಳೆಯೂ ಜೆಪ್ಪುತ್ತು. ಉದಾಸೀನ ಹಿಡಿಶುತ್ತು.ಇದಾ, ಆ ಹಳೇ ಶುದ್ದಿಯ ಮಾರಾಪಿನ ಬಿಡುಸುತ್ತೆ. ಅದು ಕಥೆಯಾ? ಶುದ್ದಿಯಾ? ಎನಗೆ ಗೊಂತಿಲ್ಲೆ ಆತಾ. ಎಂತಾಳಿ ಹೇಳಿದರೆ ಅಂಬಗ ಆನು ಬರೇ ಸಣ್ಣ ಕೂಸು. ಕನಸಿಲಿ ಕಂಡ ಹಾಂಗೇ. ಕೇಳಿದ ಹಾಂಗೇ ಆವುತ್ತು. ಆದರೂ ಹೇಳುತ್ತೆ. ಅಂಬಗ ದೇಶವ ರಕ್ಷಣೆ ಮಾಡುವ ಸೈನಿಕರ ವಿಷಯ ಏನೂ ಗೊಂತಿರ. ಸಮಾಜ ಪಾಠಲ್ಲಿಯೋ, ಚಂದಮಾಮ, ಬಾಲಮಿತ್ರದ ಕಥೆಲಿಯೋ? ಸೈನಿಕರ ಶುದ್ದಿ ಇಕ್ಕು. ಅಷ್ಟೇ ಗೊಂತು. ಬೇರೆ ಕಲ್ಪನೆಯೂ ಇಲ್ಲೇ. ಸೈನ್ಯಕ್ಕೆ ಸೇರಿದವು ಇತ್ತದೂ ಕಡಮ್ಮೆ ಆದಿಕ್ಕು. ಹಾಂಗಿಪ್ಪ ಕಾಲಲ್ಲಿ ಒಬ್ಬರು ಅಜ್ಜ ಇತ್ತಿದ್ದವು. ಎನ್ನ ಅಪ್ಪನ್ಗೆ ಅವರ ಮೇಲೆ ಭಾರೀ ಪ್ರೀತಿ. ಗೌರವ. ಹೊಗಳಿಗೊಂಡೆ ಇತ್ತಿದ್ದವು. ಎನಗೆ ಭಾರೀ ಕುತೂಹಲ ಆ ಅಜ್ಜನ ಕಥೆ. ಅಡ್ಯನಡ್ಕಕ್ಕೆ ನಡಕ್ಕೊಂಡು ಹೋಪಗ ಯಾವಾಗಾದರೂ ಆ ಅಜ್ಜ ಸಿಕ್ಕುಗೂ. ಎತ್ತರದ, ಅಗಾಲ ಶರೀರ. “ನಮಸ್ಕಾರ ” ಹೇಳುಗು ಅಪ್ಪ. ರಜ್ಜ ಹೊತ್ತು ಮಾತಾಡಿಗೊಂಡು ನಿಂಗು ಇಬ್ರುದೇ. ಆನು ನೋಡಿಗೊಂಡು ನಿಂಬದು. ಅವ್ವು ಅತ್ಲಾಗಿ ಹೋದಪ್ಪಗ “ಅಪ್ಪ…ಅಪ್ಪಾ ಆ ಅಜ್ಜ ಆರು?” ಹೇಳಿ ಕೇಳುದಾನು. “ಅವ್ವು ಮಹಾ ದೇಶ ಭಕ್ತರು. ಕಾಶ್ಮೀರ ಗಡಿಯ ಕಾವ ಸೈನಿಕರು.” ಹೇಳುಗು ಅಪ್ಪ. ಎನಗೆ ಇಡೀ ದಿನ ತಲೆಲಿ ಅದೇ ಯೋಚನೆ. ಒಂದು ದಿನ ಕೇಳಿದೆ. ಅವರ ಹೆಸರು ಹೇಂಗೆ ಅಪ್ಪಾ? ಹೇಳಿ. ಅವರ ಹೆಸರು ಡುಮ್ಮ ಶಾಸ್ತ್ರಿ ಹೇಳಿದವು. ನಿಜ ಹೆಸರೋ? ಅಡ್ಡ ಹೆಸರೋ ? ಅದೂ ಎನಗೆ ಅರಡಿಯ. “ಅವರ ಮಕ್ಕಳ ಹೆಸರು ಗೊಂತಿದ್ದೋ ಮಗಳೋ”? ಅಪ್ಪ ಕೇಳುಗು. ಮಗಳ ಹೆಸರು ಭಾರತ ಮಾತ. ಮಗ ಭಗವದ್ಗೀತನೋ , ಗೀತಾನಂದನೋ ಆಗಿರೆಕ್ಕು ಹೇಳುಗು. ಅಂಬಗ ವಿಷಯ ಎಂತರ ಹೇಳಿ ಸರಿ ಅರ್ಥಾಗಿತ್ತಿಲ್ಲೆ ಎನಗೆ. ಆ ಅಜ್ಜನ ಕುರಿತು ಒಂದು ಕಥೆ ಹೇಳಿದ್ದವು ಅಪ್ಪ. ಲೊಟ್ಟೆ ಶುದ್ದಿ ಊರಿಲಿ ಹಬ್ಬಿದ್ದ ಹೇಳಿ ಗೊಂತಿಲ್ಲೆ ಆತಾ. ಲೊಟ್ಟೆ ಆಗಿದ್ದರೆ ಅವರ ನೆಂಟರು ಎನ್ನ ಬೈಗೋ?ನೋಡುವ. ಎಂತಕು ಹೇಳುತ್ತೆ. ಈಗ ಆದರೆ ಎಲ್ಲಾ ನ್ಯೂಸ್ ಚಾನೆಲ್ ಆ ಅಜ್ಜನ ಜಾಲಿಲಿ ಇರ್ತಿತವು. ಗ್ರೇಷದ್ದೆ ಯುದ್ಧ ಸುರು ಆತಡ. ಈ ಅಜ್ಜ ಹೋರಾಡುವ ಹೆಲಿಕಾಪ್ಟರ್ ಗೆ ವೈರಿಗಳ ಗುಂಡು ಬಿದ್ದತ್ತಡ. ಅದರ ಒಳವೆ ಇದ್ದರೆ ಹೊತ್ತುತ್ತನ್ನೇ.ಅದಕ್ಕೆ ಪ್ಯಾರಾಚೂಟ್ ಬಿಡುಸಿ ಹಾರಿದವಡ. ಎಲ್ಲಿಯೋ ಗೊಂಡಾರಣ್ಯಲ್ಲಿ ಕಾಣೆ ಆದವು. ಎಷ್ಟು ಹುಡುಕಿದರೂ ಸಿಕ್ಕದ್ದೇ …ಅವರ ಮನಗೆ ಟೆಲಿಗ್ರಾo ಕಳುಸಿದವಡ. ಪಾರ್ಥಿವ ದೇಹ ಸಿಕ್ಕಿದ್ದಿಲ್ಲೆ… ಹೇಳಿ ಅವರ ಡ್ರೆಸ್, ವಸ್ತುಗೋ ಪೂರಾ ಮನಗೆ ಕಳುಸಿದವಡ ಸೈನ್ಯoದ. ಎಂತಾ ಮಾಡುದು? ಎಂತಾಳಿ ತೀರ್ಮಾನಕ್ಕೆ ಬಪ್ಪದು. “ಬದುಕಿ ಒಳಿವ ಸಾಧ್ಯತೆ ಇಲ್ಲೇ” ಹೇಳಿ ಟೆಲಿಗ್ರಾಮ್ ಬಂದ ಮತ್ತೆ… ಅವ್ವು ತೀರಿ ಹೋದವು ಹೇಳಿ ನಿಗಂಟು ಮಾಡಿದವು ಮನೇಲಿ. ಎಂತಾ ಸಂಗತಿ ಗೊಂತಿದ್ದೋ… ಅವರ ಬೊಜ್ಜದ ದಿನವೇ ಆ ಅಜ್ಜ ಅವರ ಮನಗೆ ಎತ್ತಿದವಡ! ಆರು ನಂಬವು. ಎಂತಾ ಸಂಗತಿ ಹೇಳಿ ಅರಡಿಯಡ. ಆ ಅಜ್ಜ ಪ್ಯಾರಾಚೂಟ್ ಲಿ ಹಾರಿ ಹಾರಿ ಒಂದು ಗೊಂಡಾರಣ್ಯದ ಅತಿ ಎತ್ತರದ ಮರಕ್ಕೆ ಸಿಕ್ಕಿ ತಾಂಗಿದವಡ! ಯಾವ ಜಾಗೆ ಹೇಳಿಯೂ ಗೊಂತಿಲ್ಲೆ. ಅಲ್ಲಿ ಆ ಅಜ್ಜ ಇಪ್ಪದು ಗೊಂತಾಗಿ ರಕ್ಷಿಸಿದ್ದೋ…. ಅವ್ವೆ ಪಾರಾಗಿ ಬಂದದೋ? ಗೊಂತಿಲ್ಲೆ. ಅವರ ಬೊಜ್ಜ ಮಾಡುಲೇ ಹೆರಟು ನಿಂದತ್ತು. ಸತ್ತು ಬದುಕಿದ ಅಜ್ಜ ಹೇಳಿ ಆತು. ಈ ಬಳಗಲ್ಲಿ ಆ ಅಜ್ಜನ ಬಂಧುಗೋ ಇಪ್ಪಲೂ ಸಾಕು. ಈ ಲೇಖನ ಸುತ್ತು ಸುತ್ತು ಬಂದು ಅವರ ನೆಂಟರಿಂಗೆ ಎತ್ತುಲೂ ಸಾಕು. ಅಷ್ಟಪ್ಪಗ ಸತ್ಯ ಸಂಗತಿ ಗೊಂತಪ್ಪ ಛಾನ್ಸ್ ಇದ್ದು ಹೇಳಿ ಎನ್ನ ಮನಸು ಹೇಳುತ್ತು. ಕಾದು ನೋಡುವ ಅಲ್ಲದಾ? ಆ ಕಾಲಲ್ಲಿ ಹಳ್ಳಿಯ ಮೂಲೇಲಿ ಹವ್ಯಕರೊಬ್ಬರು ಸೈನಿಕ ಆಗಿತ್ತಿದ್ದವು ಹೇಳುದೇ ಪರಮಾಶ್ಚರ್ಯ. ಅಷ್ಟೇ ಹೆಮ್ಮೆ. ಸಂತೋಷ, ಗೌರವ. ಅವರ ಹೆಸರು ಮೂಡಂಬೈಲು ನರಸಿಂಹ ಶಾಸ್ತ್ರಿ ಹೇಳಿ ಗೋಂತಪ್ಪಗ ಎಷ್ಟೋ ವರ್ಷ ಆಯಿದು. ಸ್ವಾತಂತ್ರ್ಯೋತ್ಸವದ ದಿನ ಈ ಲೇಖನದ ಲೆಕ್ಕಲ್ಲಿ ಆ ಅಜ್ಜನ ಗೌರವಲ್ಲಿ ನೆನಪು ಮಾಡುತ್ತೆ. ಕೈ ಮುಗಿತ್ತೆ. ಬಾಲ್ಯoದಲೇ ಕಾಡುತ್ತಾ ಇಪ್ಪ ಈ ಅಜ್ಜನ ಶುದ್ದಿಯ ಹೇಳಿ ಸಮಾಧಾನ ಆತು. ಎಡಿಗಾದಷ್ಟು ಸಣ್ಣಕ್ಕೆ ಬರದೆ. ಅಕ್ಕಂಬಗ ಕಾಂಬ.

ಮುಂದೆ ಓದಿ »
Independence
ಇತರೆ
ಸಂಪಾದಕ˚

ಸಿದ್ದಾಪುರ ತಾಲೂಕಿನ ಮಹಿಳಾ ಹೋರಾಟಗಾರರು

(ಡಾ. ಚಂದ್ರಮತಿ ಸೋಂದಾ ಇವು ಕನ್ನಡದಲ್ಲಿ ಬರ್ದ ಲೇಖನವನ್ನ ನಾಗಪ್ಪ ಗಾಂವ್ಕರ ಗೋಡೆಪಾಲ್‌ ಹವ್ಯಕಭಾಷೆಗೆ ಭಾಷಾಂತ್ರ ಮಾಡಿದ್ರು) **** ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗಂಡಸ್ರು, ಹೆಂಗ್ಸ್ರು ಅತಿ ಹೆಚ್ಚಿಗೆ ಪ್ರಮಾಣದಲ್ಲಿ ಭಾಗವಹಿಸಿದ್ದವು. ಅಲ್ಲಿಯ ಜನ ಜೋಗ ಜಲಪಾತ ನೋಡಲೆ ಬಪ್ಪು ಬಿಳಿಜನ ಮತ್ತೆ ಶಿಕಾರಿಗೆ ಬಪ್ಪು ಬ್ರಿಟಿಷ್ ಅಧಿಕಾರಿಗಳಿಂದ ಬಹಳ ತೊಂದರೆಗೆ ಸಿಕ್ಕಾಕಿಕೊಂಡೊವ್ವು. ಅ ಕಾಲಕ್ಕೆ ಇಂಗ್ಲಿಷಲ್ಲಿ ಮಾತಾಡುವ ಹೆಂಗಸರು, ಮಕ್ಕೊ ಇದ್ದಿದ್ವಡ. ಓದು ಬರಹ ಕಲಿಲೇ ಹೊರಗೆ ಹೋಗಿ ಬಂದವ್ವು ಇದ್ದದ್ರಿಂದಾನೇ ಮಹಾತ್ಮ ಗಾಂಧೀಜಿಯವರ ಕರೆಗೆ ಓಗೊಟ್ಟು ಈ ತಾಲೂಕಿನ ಸಾವಿರಕ್ಕೂ ಹೆಚ್ಚು ಪುರುಷರು ಹಾಗೂ ಮಹಿಳೆಯರು ಸ್ವಯಂಪ್ರೇರಿತರಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಜೈಲು ಸೇರಿದ್ದೋ ಹೇಳಿ ಹೇಳಿಕೆಯಿದ್ದು. ಸಿದ್ದಾಪುರ ತಾಲೂಕಿನ ಮುಂದಾಳು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಅವರ ಹೋರಾಟದ ವಿವರ ಈ ಕೆಳಗಿದ್ದು. ಪ್ರಮುಖ ಮಹಿಳಾ ಹೋರಾಟಗಾರ್ತಿಯರು:ಸಿದ್ದಾಪುರ ತಾಲೂಕಿನಲ್ಲಿ ಮಹಿಳೆಯಕ್ಕ ನಡೆಸಿದ ಸತ್ಯಾಗ್ರಹಗಳು ಚರಿತ್ರೆಲಿ ಸೇರಿದ್ದು ಇದ್ದು. ಅದ್ರಲ್ಲಿ, ಕರನಿರಾಕರಣೆ ಚಳವಳಿ ಮತ್ತು ಜಪ್ತಿ ವಿರೋಧಿ ಹೋರಾಟದಲ್ಲಿ ಇಲ್ಲಿನ ಮಹಿಳೆಯರು ಬ್ರಿಟಿಷ್ ಅಧಿಕಾರಿಗಳಿಗೆ ಹೆದ್ರಿಸಿ, ನೀರಕುಡ್ಸಿದ್ದು ಈಗ ಕತೆ ಹಾಂಗೆ ಕಾಣ್ತು. ಅದ್ರೆ ಅದು ಸತ್ಯವಾಗಿತ್ತು. ಹೆಂಗಸರ ಪೈಕಿ ಕೆಲೂ ಹೆಸ್ರ ನೆನ್ಪ್‌ ಮಾಡ್ತೆ. ಬಾಕಿ ಉಳದವ್ಕೆ ಮನಸ್ಸಿನಲ್ಲೇ ನಮಸ್ಕಾರ. ಮಹಾದೇವಿ ತಾಯಿ ಹೆಗಡೆ: ಸಿದ್ದಾಪುರ ತಾಲೂಕಿನ ‘ದೊಡ್ಡಮನೆ’ಯ ಕೂಸು ಇವ್ರು. ಬಾಲ್ಯವಿವಾಹ, ವೈಧವ್ಯದಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡ್ಕತ್ತೆಯಾ ಸ್ವಾತಂತ್ರ್ಯ ಚಳವಳಿಗೆ ಧುಮುಕಿದ ಛಲಗಾತಿ. ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಇವ್ರು ನಂತ್ರ ಗಾಂಧೀಜಿಯವ್ರ ಆಶ್ರಮದ ಪ್ರೇರಣೆಯಿಂದ ‘ವಿಶ್ವನೀಡಂ’ ಟ್ರಸ್ಟ್ ಸ್ಥಾಪಿಸಿದ್ರು. (ಇವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆಯವರ ಸೋದರಸಂಬಂಧಿ). ಗಣಪಮ್ಮ ಕುಳಿಬೀಡು: 1932ರಲ್ಲಿ ಬ್ರಿಟಿಷ್ ಅಧಿಕಾರಿಗಳು ಸತ್ಯಾಗ್ರಹಿಗಳ ಮನೆಯ ಎಮ್ಮೆಗಳನ್ನು ಜಪ್ತಿ ಮಾಡಿ ಹರಾಜು ಹಾಕ್ದಾಗ, ಆ ನೌಕರನ ಮನೆಯ ಮುಂದೆ ಧರಣಿ ಕೂತು ಎಮ್ಮೆನ ವಾಪಸ್ ಪಡಕೊಂಡ ಧೀಮಂತೆ. ಸೀತಮ್ಮ ಹೊಸಕೊಪ್ಪ, ದೇವಮ್ಮ ಹೇಮಗಾರ ಮತ್ತು ಭಾಗಿರಥಮ್ಮ ಕುಳಿಬೀಡು: ಗಣಪಮ್ಮ ಅವ್ರಿಗೆ ಹೆಗಲಿಗೆ ಹೆಗಲು ಕೊಟ್ಟು ಬ್ರಿಟಿಷರ ದೌರ್ಜನ್ಯದ ವಿರುದ್ಧ ಸತ್ಯಾಗ್ರಹ ನಡೆಸಿದ ಧೀರ ವನಿತೆಯರು. ಭುವನೇಶ್ವರಮ್ಮ ತ್ಯಾಗಲಿ ಮತ್ತು ಲಕ್ಷ್ಮಮ್ಮ: ಮಾವಿನಗುಂಡಿ ಭಾಗದಲ್ಲಿ ಬ್ರಿಟಿಷ್ ಪೊಲೀಸ್ರು ವಶಪಡಿಸಿಕೊಂಡಿದ್ದ ಜಾನುವಾರುಗಳನ್ನ ಹರಾಜ್ನಲ್ಲಿ ತಗಂಡಾಗ, ಅದ್ರ ವಿರುದ್ಧ ಪ್ರತಿಭಟ್ನೆ ಮಾಡಿ ಹೋರಾಟ ನಡ್ಸಿದ ಸ್ವತಂತ್ರ ಹೋರಾಟಗಾರ್ತಿ. ಇನ್ನು ಎಷ್ಟೋ ಹೆಣ್ಮಕ್ಕೋ ಬೇರೆ ಬೇರೆ ಹೋರಾಟದಲ್ಲಿ ಭಾಗವಹಿಸಿದ್ದೋ. ಅದ್ರಲ್ಲಿ ಒಂದೆರಡು ಉದಾಹರಣೆ ಅಬ್ಬಾ ಅನ್ನ ಹಾಂಗಿದ್ದು. ಅರಣ್ಯ ಸತ್ಯಾಗ್ರಹದಲ್ಲಿ ಭಾಗವಹಿಸಕ್ಕೆ ಮೊದ್ಲೇ ಶ್ಯಾಮಭಟ್ಟ ಬಿಸಲಕೊಪ್ಪ ಅವ್ರನ್ನ ಪೊಲೀಸರು ಬಂಧಿಸಿದ್ದ. ಈ ವಿಷಯ ತಿಳ್ದ್‌ಕೋಡ್ಲೆ ಅವ್ರ ಹೆಂಡತಿ ಸುಮ್ಮಂಗಿರ್ದೆ ತಾನೇ ಮರ ಕಡ್ದು ಅರಣ್ಯ ಸತ್ಯಾಗ್ರಹ ನಡೆಸಿ ಸ್ವತಃ ಪೊಲೀಸರ ಹತ್ರ ಹೋಗಿ `ನಾನೂ ಕಾನೂನು ಉಲ್ಲಂಘನೆ ಮಾಡಿದ್ದೆ, ನನ್ನನ್ನೂ ಬಂಧಿಸಿ’ ಅಂತ ಕೇಳತ್ಯು.. ಆದ್ರೆ ಪೊಲೀಸ್ರು ಅದ್ನ ಬಂಧಿಸಿದ್ವಿಲ್ಲೆ.  ಅಷ್ಟಕ್ಕೆ ಸುಮ್ಮನಾಗದೆ ಅದೇ ದಿನ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡತ್ಯು.`ನಾನು ಕಾನೂನು ಉಲ್ಲಂಘನೆ ಮಾಡಿದ್ರು ನನ್ನನ್ನ ಬಂಧಿಸದೆ ಅನ್ಯಾಯ ಮಾಡ್ತಿದ್ದ. ಬನ್ನಿ ನಾವೆಲ್ಲ ಮಹಿಳೆಯರು ಒಟ್ಟಾಗ್‌ ಸೇರ್ಕಂಡು ಕಾನೂನು ಉಲ್ಲಂಘನೆ ಮಾಡ್ವ’ ಅಂತ ಹೇಳಿ ಹೆಣ್ಮಕ್ಕೋ ಸತ್ಯಾಗ್ರಹದಲ್ಲಿ ಸೇರ್ಕಂಬ ಹಾಂಗೆ ಪ್ರಚೋದನಕಾರಿಯಾಗಿ ಭಾಷಣ ಮಾಡತ್ಯು. ಈ ಬಗೆದೆಯ ಒಂದ್‌ ಘಟನೆ ಶಿರಸಿಲೂ ನಡ್ದಿತ್ತು. ಮುಂದಾಳಾಗಿದ್ದ ಸೀತಾಬಾಯಿ ಪೊಲೀಸ್ ಸ್ಟೇಶನ್ನಿಗೆ ಹೋಗಿ ತನ್ನ ಬಂಧಿಸಿ ಅಂತ ಕೇಳಿದ್ದಕ್ಕೆ ಯಾಕೆ ಬಂಧಿಸಬೇಕು ಅಂತ ಕೇಳಿದ ಪೊಲೀಸ್‌ ಅಧಿಕಾರಿಗೆ ತಾನು ಕಾನೂನುಭಂಗ ಮಾಡ್ಲೇ ಬಂದೆ. ನಿಂಗ್ಳ ಬ್ರಿಟಿಷ್ ಕಾನೂನು ಸತ್ತುಹೋಯ್ದು ಅಂತ ಭಾಳ ಧೈರ್ಯದಿಂದ ಹೇಳತ್ಯು. ‘ನಿನ್ನ ಮೇಲೆ ಕೇಸ್ ಹಾಕ್ತʼ ಅಂತ ಅಧಿಕಾರಿ ಬೆದರಿಸಿದ್ರೆ ‘ನಾನು ಅದಕ್ಕೆ ಸಿದ್ಧʼ ಅನ್ನ ಉತ್ತರ ಅದ್ರದ್ದು. ಯಾವುದಕ್ಕೂ ಹೆದರದೆ ಸತ್ಯಾಗ್ರಹದಲ್ಲಿ ಭಾಗವಹಿಸಿ ಜೈಲುಶಿಕ್ಷೆನ ಅನುಭವಿಸ್ತು. ಪ್ರವಾಸಿ ತಾಣವಾಗಿರ ಜೋಗ ಜಲಪಾತ ನೋಡುಲ್‌ ಬಪ್ಪೂ ಬ್ರಿಟೀಷ್ ಅಧಿಕಾರಿಗೋ, ಮತ್ತೆ ಅವ್ರ ಕಡೆಗೆ ಸೇರ್ಕಂಡ ಭಾರತದ ಮೂರ್ಖರು, ಸಿದ್ದಾಪುರದ ಸುತ್ತಮುತ್ತಲಿನ ಜನಕ್ಕೆ ರಾಶಿ ಹಿಂಸೆ ಕೊಡ್ತಿಪ್ಪೋ ಹೇಳಿ ಹಳೆಕಾಲದವು ಹೇಳಿದ್ದ ಕೇಳಿದ್ದೆ. ಮತ್ತೊಂದು ಎಂತಾದು ಅಂದ್ರೆ, ಮಾವಿನಗುಂಡಿ ಸುತ್ತ ಮುತ್ತ ಇಪ್ಪುದೆಲ್ಲ ಕರೀಕಾಡೆಯಾ. ಕಡು, ಗಮೆಯ, ಜಿಂಕೆ ಹಿಂಡಹಿಂಡಾಗಿ ಬೆಳಿವಾಗ ಹುಲಿ ಹಿಂಡೂ ಹೆಚ್ಚಾಗ್ತು. ಹುಲಿ ಶಿಕಾರಿ ಹುಚ್ಚು ಬಿಳಿ ಜನಕ್ಕೆ ಯಾವಾಗ್ಲೂ ಇದ್ದದ್ದೆಯಾ. ಅವರ ಸಂಗ್ತಿಗೆ ಸೇರ್ಕಂಡ ಹಳ್ಳಿಯ ಕೆಲಜನ, ಆ ಸಾಯ್ಬಂಗೋ ಒಗೆಯೋ ಸರಾಯ ಬಾಟ್ಲಿ ಹುಡ್ಕಲೆ ತಾಗ್ದ. ಇದ್ರಿಂದ ಮನೆಲಿ ರಂಪಾಟ ಹೆಚ್ಚಲ್‌ ತಾಗಿದ್ದೇ ಅಲ್ಲಿಯವು ಸರಕಾರದ ವಿರದ್ಧ ತಿರುಗಿ ಬೀಳೂಲೆ ಕಾರಣ ಆತು ಹೇಳೂ ವಾಡಿಕೆ ಮಾತೂ ಇದ್ದು. ಆ ಕಾಲದಲ್ಲಿ ನಮ್ಮ ದೇಶದ ಸ್ವತಂತ್ರಕ್ಕಾಗಿ ಸಿಡಿದು ನಿಂತು ಲಾಟಿ ಏಟೂ, ಸೆರಮನೆವಾಸದ ಕಷ್ಟ ಉಂಡ ಹಿರಿಯಂಗೋಕ್ಕೆ ಎಂಬತ್ತನೆ ಸ್ವಾತಂತ್ರ್ಯ ಹಬ್ಬದ ದಿನದ ನಮನ.

ಮುಂದೆ ಓದಿ »

ಹವ್ಯಕ ವಿಶ್ವ :

ಹವ್ಯಕ ಭಾಷೆಗಾಗಿ, ಹವ್ಯಕ ಸಮಾಜಕ್ಕಾಗಿ

ಹವ್ಯಕ ವಿಶ್ವ- ಹವ್ಯಕ ಭಾಷೆಗಾಗಿ, ಹವ್ಯಕ ಸಮಾಜ, ಹವ್ಯಕ ಬಂಧುಗೊಕ್ಕಾಗಿ ಹವ್ಯಕರೇ ರೂಪಿಸಿದ ವೆಬ್‌ತಾಣ. ಹವ್ಯಕರ ಜಾಲ ಬಿಡಾರ ಹೇಳಿ ಹೇಳ್ಳಕ್ಕು. ಹವ್ಯಕ ಭಾಷಾ ಸಾಹಿತ್ಯದ ಬಗ್ಗೆ ತುಡಿತ ಇಪ್ಪಂತಹ ಸಮಾನ ಮನಸ್ಕರ ಹಲವು ವರ್ಷಗಳ ಕನಸು ಇದು. ಅದೀಗ ನನಸಾವುತ್ತಾ ಇದ್ದು. ಬಲು ವಿಶಿಷ್ಟ ಆಗಿಪ್ಪ ಹವಿಗನ್ನಡ ಭಾಷೆಲಿ ಸಾಹಿತ್ಯ ಕೃಷಿ ಮಾಡುವ, ಆಸಕ್ತ ವಿಷಯಂಗಳ ಬಗ್ಗೆ ಅಕ್ಷರ ರೂಪಕ್ಕೆ ಇಳುಶುವ ಬರಹಗಾರರ, ಬೇರೆ ಬೇರೆ ಕ್ಷೇತ್ರಲ್ಲಿ ಸಾಧನೆ ಮಾಡಿ ಸಮಾಜದ ಹೆಮ್ಮೆ ಆಗಿಪ್ಪಂತಹ ಜನರ ಪರಿಚಯ ಮಾಡುವ, ಅದರೊಟ್ಟಿಂಗೆ ಎಲೆಮರೆ ಕಾಯಿಯ ಹಾಂಗಿಪ್ಪ ಸಮಾಜದ ಪ್ರತಿಭೆಗಳ ಬಗ್ಗೆ ಜಗತ್ತಿಂಗೆ ತಿಳುಶುವ ವೇದಿಕೆ ಇದು. ಹವ್ಯಕ ಸಮಾಜದ ಇತಿಹಾಸ, ಆಚಾರ ವಿಚಾರ, ಸಂಸ್ಕೃತಿ, ಆಹಾರ ಕ್ರಮ, ಜೀವನ ಶೈಲಿ, ಕೃಷಿಯ ಬಗ್ಗೆ ಹೊಸ ತಲೆಮಾರಿಂಗೆ ತಿಳಿಸುವ ವೇದಿಕೆಯೂ ಅಪ್ಪು. ಹವ್ಯಕರಿಂಗೆ ಸಂಬಂಧಪಟ್ಟ ಎಲ್ಲ ವಿಷಯಂಗಳೂ ಈ ತಾಣಲ್ಲಿ ಸಿಕ್ಕುತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಆಸುಪಾಸಿಲ್ಲಿ ಚಾಲ್ತಿಲಿಪ್ಪ ಹವಿಗನ್ನಡ ಅಥವಾ ಉತ್ತರ ಕನ್ನಡದ ಸುತ್ತಮುತ್ತ ಮಾತಾಡುವ ಹವಿಗನ್ನಡಕ್ಕೆ ಮಾತ್ರ ಹವ್ಯಕ ವಿಶ್ವ ಸೀಮಿತ ಅಲ್ಲ. ಈ ಎರಡು ಭಾಷೆಗೊಕ್ಕೂ ಇಲ್ಲಿ ಅವಕಾಶ ಇದ್ದು. ಈ ಎರಡೂ ಪ್ರದೇಶಲ್ಲಿಪ್ಪ ಹವ್ಯಕರಲ್ಲದ್ದೆ, ವಿವಿಧ ದೇಶ, ರಾಜ್ಯಂಗಳಲ್ಲಿ ನೆಲೆಕಂಡುಕೊಂಡಿಪ್ಪ ಎಲ್ಲ ಹವ್ಯಕರನ್ನು ತಲುಪುವ ಪ್ರಯತ್ನವೂ ಅಪ್ಪು. ಈ ಜಾಲ ಬಿಡಾರಕ್ಕೆ ಆರು ಬೇಕಾದರೂ ಬರವಲಕ್ಕು. ಒಂದೇ ಒಂದು ನಿರೀಕ್ಷೆ. ಎಂತ ಹೇಳಿರೆ, ಬರಹಂಗೊ ಎಲ್ಲವೂ ಹವ್ಯಕ ಭಾಷೆಲಿ ಇರೆಕು. ಮಾಹಿತಿ ಪೂರ್ಣವಾಗಿರೆಕು. ಅದರಿಂದ ಹವ್ಯಕರಿಂಗೆ ಅನುಕೂಲ ಆಯೆಕು. ಪ್ರದೇಶವಾರು, ಭಾಷಾವಾರು ಭೇದ ಇಲ್ಲದ್ದೆ, ಹವ್ಯಕ ಭಾಷಾ ಸಾಹಿತ್ಯವ ಬೆಳಶುವ ಆಶಯಲ್ಲಿ ಶುರು ಮಾಡ್ತಾ ಇಪ್ಪ “ಹವ್ಯಕ ವಿಶ್ವ”ಕ್ಕೆ ಪ್ರಪಂಚದಾದ್ಯಂತ ಇಪ್ಪ ಹವ್ಯಕರ ಬೆಸೆವ ಉದ್ದೇಶವೂ ಇದ್ದು.

ಲೇಖಕರು

ನಿಂಗಳ ಅಚ್ಚುಮೆಚ್ಚಿನ ಲೇಖಕರ ಹೊಸ ಬರಹಂಗೊ, ಪ್ರೇರಣೆ ನೀಡುವ ಕಥೆಗೊ, ಹೊಸ ಆಲೋಚನೆಗೊ ಎಲ್ಲವೂ ಒಂದೇ ಜಾಗೆಲಿ

ಸಂಪರ್ಕಿಸಿ

ಯಾವುದೇ ಪ್ರಶ್ನೆ, ಸಲಹೆ ಅಥವಾ ಲೇಖನ ಕಳುಸಲೆ ಈ ಅರ್ಜಿ ಉಪಯೋಗಿಸಿ ಅಥವಾ ನೇರವಾಗಿ ಸಂಪರ್ಕಿಸಲಕ್ಕು.

ಬನ್ನಿ ಹವ್ಯಕ ಭಾಷೆ, ಸಾಹಿತ್ಯ ಬೆಳೆಶುವೊ°

2025ರ ಜೂನ್‌ 28 ಶನಿವಾರ. ಬೆಂಗ್ಳೂರಿಲ್ಲಿ ಆತ್ಮೀಯರೊಬ್ಬರ ಮನೆಲಿ ಪೂಜೆ. ಐದು ಜೆನ ಚೆಂಙಾಯಿಗೊ ಸೇರಿತ್ತಿದೆಯಾ°. ಡಿಜಿಟಲ್‌, ಫೇಸ್‌ಬುಕ್‌, ಯೂಟ್ಯೂಬ್‌, ಟ್ವಿಟರ್‌, ಇನ್‌ಸ್ಟಾಗ್ರಾಂ ವಿಡಿಯೊ, ರೀಲ್ಸ್‌.. ಹೀಂಗಿಪ್ಪ ವಿಷಯಂಗಳ ಬಗ್ಗೆ ಅಂತೇ ಲೊಟ್ಟೆ ಪಟ್ಟಾಂಗ ಹೊಡಕ್ಕೊಂಡಿಪ್ಪಗ, “ಸುದ್ದಿ ವೆಬ್‌ಸೈಟುಗ ಸಾವಿರ ಇದ್ದು ನಾವೇಕೆ ಒಂದು ಹವ್ಯಕ ಭಾಷೆಯ ವೆಬ್‌ಸೈಟ್‌ ಮಾಡ್ಳಾಗ” ಹೇಳ್ತ ಸಲಹೆ ಒಂದು ಬಂತು. ಒಟ್ಟಿಂಗಿದ್ದ ಎಲ್ಲರಿಂಗೂ ಸಾಹಿತ್ಯಲ್ಲಿ, ವಿಶೇಷವಾಗಿ ಹವ್ಯಕ ಸಾಹಿತ್ಯಲ್ಲಿ ಆಸಕ್ತಿ ಇಪ್ಪ ಕಾರಣಂದ, ಎಲ್ಲರ ಬಾಯಿಂದ ಬಂದದು ಆಗದ್ದಿಲ್ಲೆ ಹೇಳ್ತ ಉತ್ತರ. ಮಾಡ್ತರೆ ವೆಬ್‌ಸೈಟ್‌ ಹೇಂಗಿರೆಕ್ಕು ಹೇಳ್ತ ಚರ್ಚೆ ಅಲ್ಲಿ ಸಣ್ಣ ಮಟ್ಟಿಂಗೆ ಆತು. ಕನ್ನಡ ಉಪಭಾಷೆಯಾದ ಹವಿಗನ್ನಡ ಅಥವಾ ಹವ್ಯಕ ಭಾಷೆ ಮಾತಾಡ್ಳೂ, ಕೇಳ್ಳೂ ತುಂಬಾ ಹಿತ ಅಪ್ಪಂತಹ ಭಾಷೆ. ಆದರೆ, ಈ ಭಾಷೆಲಿ ವೈವಿಧ್ಯ ಇದ್ದು. ದಕ್ಷಿಣದ ಹೊಡೆ ಮತ್ತೆ ಉತ್ತರದ ಹೊಡೆಲಿ ಚಾಲ್ತಿಲಿಪ್ಪ ಭಾಷೆಲಿ ಪ್ರಧಾನ ವ್ಯತ್ಯಾಸ ಇದ್ದರೆ, ಸೀಮೆಂದ ಸೀಮೆಗೆ ಭಾಷೆ, ಪದ ಬಳಕೆಲಿ ರಜ್ಜ ರಜ್ಜ ವ್ಯತ್ಯಾಸ ಕಾಣ್ತು. ಹೀಂಗಾಗಿ ಎಲ್ಲ ರೀತಿಯ ಹವಿಗನ್ನಡಕ್ಕೆ ಅವಕಾಶ ಇಪ್ಪ ವೆಬ್‌ಸೈಟ್‌ ಅದಾಯೆಕ್ಕು ಹೇಳ್ತದು ಐದೂ ಜೆನರ ಸರ್ವಸಮ್ಮತ ತೀರ್ಮಾನ ಆಗಿದ್ದತ್ತು. ರಾಜ್ಯ ಮಾತ್ರ ಅಲ್ಲದ್ದೆ, ಹೊರ ರಾಜ್ಯ, ವಿದೇಶಲ್ಲಿಪ್ಪ ಹವ್ಯಕರನ್ನೂ ಬೆಸೆಯುವ ಜಾಲ ತಾಣ ಇದಾಯೆಕ್ಕು ಹೇಳ್ತ ಉದ್ದೇಶಂದ ವೆಬ್‌ಸೈಟಿಂಗೆ “ಹವ್ಯಕ ವಿಶ್ವ” ಹೇಳಿ ಹೆಸರು ಮಡುಗುವ ತೀರ್ಮಾನವನ್ನೂ ಅಂದೇ ಮಾಡಿತ್ತಿದು. ನಂತರ ಹಲವು ಸರ್ತಿ ಸಭೆ ಸೇರಿ ವೆಬ್‌ಸೈಟ್‌ನ ರೂಪುರೇಷೆ ಹೇಂಗಿರೆಕು ಹೇಳ್ತದರೆಲ್ಲ ಚರ್ಚೆ ಮಾಡಿ ಕನಸಿಂಗೆ ಒಂದು ಸ್ಪಷ್ಟ ರೂಪಕೊಟ್ಟತ್ತು.

ಆರು ತಿಂಗಳ ಹಿಂದೆ ಹಾಕಿದ ಬೀಜ ಚಿಗುರೊಡೆದು, ಈಗ ಸೆಸಿಯಾಗಿ ನಿಂತಿದು. ಇದು ಹವ್ಯಕ ಭಾಷೆ, ಹವ್ಯಕ ಸಾಹಿತ್ಯ ಮತ್ತೆ ಹವ್ಯಕ ಸಮಾಜಕ್ಕಾಗಿ ಮಾಡಿದ ವೆಬ್‌ಸೈಟ್‌. ಭಾಷಾ ಭೇದ, ಪ್ರಾಂತ್ಯ ಭೇದ ಇಲ್ಲದ್ದೆ ಹವ್ಯಕಲ್ಲಿ ಸಾಹಿತ್ಯ ಕೃಷಿ ಮಾಡುವವಕ್ಕೆ ಪ್ರೋತ್ಸಾಹ ಕೊಡುವ, ಹವ್ಯಕರ ಆಚಾರ- ವಿಚಾರ, ಸಂಸ್ಕೃತಿ, ಆಹಾರ, ಕೃಷಿ ವಿಧಾನಂಗಳ ಮುಂದಿನ ತಲೆಮಾರುಗೊಕ್ಕೆ ತಿಳಿಸುವ ಪ್ರಧಾನ ಉದ್ದೇಶ ಹವ್ಯಕ ವಿಶ್ವದ್ದು. ವಿವಿಧ ಕ್ಷೇತ್ರಂಗಳಲ್ಲಿ ಸಾಧನೆ ಮಾಡಿದ ಹವ್ಯಕರ ಪರಿಚಯ ಮಾಡುದು, ಆಧುನಿಕ ತಂತ್ರಜ್ಞಾನ, ಶಿಕ್ಷಣ, ಷೇರುಪೇಟೆ, ವೈಯಕ್ತಿಕ ಬ್ಯಾಂಕಿಂಗ್‌ ಸೇರಿ ಈಗಿನ ಕಾಲಲ್ಲಿ ಸಮಾಜದವಕ್ಕೆ ಬೇಕಾದ ಅಗತ್ಯ ಮಾಹಿತಿಯ ನೀಡುವ ಉದ್ದೇಶವೂ ಇದ್ದು. ಹವ್ಯಕ ಯುವ ಸಮುದಾಯಕ್ಕೆ ಉದ್ಯೋಗ ಮಾಹಿತಿ ಕೊಡುವುದರ ಒಟ್ಟಿಂಗೆ, ಉದ್ಯಮ ನಡೆಶುತ್ತಿಪ್ಪ ಹವ್ಯಕರಿಂಗೆ ಪ್ರೋತ್ಸಾಹ ನೀಡುವ ಯೋಚನೆಯೂ ಇದ್ದು. ವೈವಿಧ್ಯಮಯ ಹವ್ಯಕ ಭಾಷೆಯ ಕಲುಶುವ ಪ್ರಯತ್ನವೂ ಇಲ್ಲಿದ್ದು. ಒಟ್ಟಾರೆಯಾಗಿ ಹವ್ಯಕರಿಂಗೆ ಬೇಕಾದ ಎಲ್ಲ ವಿಷಯಂಗಳನ್ನೂ ಅಬ್ಬೆ ಭಾಷೆಲಿ ತಿಳಿಸುವ ಪ್ರಯತ್ನ ಇದು.

ಈ ಎಲ್ಲ ಕೆಲಸಂಗಳನ್ನೂ ತುಂಬಾ ವೃತ್ತಿಪರತೆಯಿಂದ ಮಾಡೆಕ್ಕು ಹೇಳ್ತದು ಎಂಗಳ ಆಶಯ ಆದ ಕಾರಣ, ವೆಬ್‌ಸೈಟ್‌ನ ನಿರ್ವಹಿಸಲೆ ಎಸ್‌ಆರ್‌ಕೆ ಮೀಡಿಯಾ ವಿಷನ್‌ ಹೇಳ್ತ ಕಂಪನಿಯ ಸ್ಥಾಪನೆ ಮಾಡಿದ್ದು. ಅದರ ಅಡಿಲಿ ಹವ್ಯಕ ವಿಶ್ವ.ಕಾಂ ಕಾರ್ಯನಿರ್ವಹಿಸುತ್ತು. ವೆಬ್‌ಸೈಟ್ ಮೂಲಕವಾಗಿ ಹವ್ಯಕ ಬರಹಗಾರರ/ಲೇಖಕರ ದೊಡ್ಡ ಸಮೂಹವನ್ನೇ ಸೃಷ್ಟಿ ಮಾಡೆಕ್ಕು ಹೇಳ್ತದು ‘ಹವ್ಯಕ ವಿಶ್ವ’ದ ಅಭಿಲಾಷೆ. ಹಾಂಗಾಗಿ ಹವ್ಯಕ ಭಾಷೆಲಿ ಬರೆತ್ತವಕ್ಕೆ ಮುಕ್ತ ಅವಕಾಶ ಇದ್ದು. ವೆಬ್‌ಸೈಟ್‌ ಯಾವ ರೀತಿ ಇರೆಕು, ಯಾವ್ಯಾವ ಅಂಶಂಗಳ ಅದು ಒಳಗೊಂಡಿರೆಕು ಹೇಳ್ತದರ ಬಗ್ಗೆ ಹಲವು ಜೆನಂಗೊ ಸಲಹೆ ಸೂಚನೆಗೊ ಕೊಟ್ಟಿದವು. ಅವೆಲ್ಲವನ್ನೂ ಪರಿಗಣಿಸಿದ್ದು. ಮುಂದೆಯೂ ಸಮಾಜದವರ ಅಭಿಪ್ರಾಯಕ್ಕೆ ಮನ್ನಣೆ ಕೊಡ್ತೆಯಾ° . ಹವ್ಯಕ ಭಾಷೆ, ಸಮಾಜಕ್ಕೆ ಏನಾದರೊಂದು ಕೊಡುಗೆ ಕೊಡೆಕ್ಕು ಹೇಳ್ತ ಆಶಯಂಗಳಲ್ಲಿ “ಹವ್ಯಕ ವಿಶ್ವ” ಮೊದಲಾಣ ಹೆಜ್ಜೆ. ಇನ್ನೂ ಕೆಲವು ಯೋಚನೆಗೊ ಮನಸ್ಸಿಲ್ಲಿದ್ದು. ಹಂತ ಹಂತವಾಗಿ ಎಲ್ಲವನ್ನೂ ತಿಳುಶುತ್ತೆಯಾ°.

ಸೂರ್ಯದೇವರು ಪಥ ಬದಲುಸುತ್ತಾ ಇಪ್ಪ ಪರ್ವ ಕಾಲಲ್ಲಿ ಒಂದು “ಕ್ರಾಂತಿ” ಮಾಡ್ಳೆ ಹೆರಟಿದೆಯೊ°. ಹವಿಗನ್ನಡ ಯಾ ಹವ್ಯಕ ಭಾಷೆ, ಸಾಹಿತ್ಯಯಲ್ಲಿ “ಅಕ್ಷರ ಕ್ರಾಂತಿ” ಸೃಷ್ಟಿಸೆಕ್ಕು ಹೇಳ್ತದು ಎಂಗಳ ಅಭಿಲಾಷೆ. ಸಮಾಜದ ಗುರು ಹಿರಿಯರ ಆಶೀರ್ವಾದ, ಕಿರಿಯರ ಸಹಕಾರ ಇದ್ದರೆ ಆಶಯ ನೆರವೇರುವುದು ಕಷ್ಟವೇನಲ್ಲ.

ಸಂಕ್ರಮಣದ ಈ ಹೊತ್ತಿಲ್ಲಿ ಸಮಾಜದ ಎಲ್ಲೋರ ಪ್ರೋತ್ಸಾಹ, ಸಹಕಾರವ ನಿರೀಕ್ಷಿಸುತ್ತಾ “ಹವ್ಯಕ ವಿಶ್ವ”ವ ನಿಂಗಳ ಮುಂದೆ ಮಡುಗುತ್ತಾ ಇದ್ದೆಯಾ°.

ಹರಸಿ.. ಹಾರೈಸುವುದರೊಟ್ಟಿಂಗೆ ಅಬ್ಬೆ ಭಾಷೆ, ಅದರ ಸಾಹಿತ್ಯವ ಒಟ್ಟಿಂಗೆ ಬೆಳೆಶುವೊ°.

ಎಸ್‌ಆರ್‌ಕೆ ಮೀಡಿಯಾ ವಿಷನ್‌
ಹವ್ಯಕ ವಿಶ್ವ ಬಳಗ

ಬನ್ನಿ ಹವ್ಯಕ ಭಾಷೆ, ಸಾಹಿತ್ಯವ ಉಳ್ಸಿ ಬೆಳೆಸ್ವ

2025 ಜೂನ್‌ 28, ಆವತ್ತು ಶನಿವಾರ. ಬೆಂಗ್ಳೂರಿನ ಸ್ನೇಹಿತ್ರೊಬ್ರ ಮನೆಲಿ ಪೂಜೆ ಇತ್ತು. ರಾಶಿ ದಿನ ಆದ್ಮೇಲೆ ಪೂಜೆ ನೆಪ್ದಲ್ಲಿ ಕಟ್ಟಾ ದೋಸ್ತಿಗಳೆಲ್ಲಾ ಸೇರಿದಿದ. ಸ್ವಲ್ಪ ಹೊತ್ತು ಅದು ಇದು ಹರಟೆ ಹೊಡ್ದಾದ್ಮೇಲೆ ಡಿಜಿಟಲ್‌, ಫೇಸ್‌ಬುಕ್‌, ಯೂಟ್ಯೂಬ್‌, ಟ್ವಿಟರ್‌, ಇನ್‌ಸ್ಟಾಗ್ರಾಂ ವಿಡಿಯೊ, ರೀಲ್ಸ್‌..ಗಳ ಬಗ್ಗೂ ಮಾತ್ಕತೆ ಶುರ್ವಾತು. “ಸಾವ್ರಾರು ನ್ಯೂಸ್‌ ವೆಬ್‌ಸೈಟ್‌ ಇದ್ದು, ನಾವ್‌ ಎಂತಕ್ಕೆ ಒಂದು ಹವ್ಯಕ ಭಾಷೆಯ ವೆಬ್‌ಸೈಟ್‌ ಮಾಡ್ಲಾಗಾ?” ಹೇಳು ಸಲಹೆ ಬಂತು. ಸೇರ್ದವ್ಕೆಲ್ಲಾ ಸಾಹಿತ್ಯದಲ್ಲಿ ಅದ್ರಲ್ಲೂ ಹವಿಗನ್ನಡ ಸಾಹಿತ್ಯದಲ್ಲಿ ಹೆಚ್ಚಿನ ಒಲವಿತ್ತು. ಹಿಂಗಾಗಿ, ಇಂಥ ಒಂದ್‌ ಸಲಹೆ ಬಂದದ್ದೇ ಎಲ್ಲವೂ ಜೈ ಅಂದ. ವೆಬ್‌ಸೈಟ್‌ ಮಾಡಿದ್ರೆ ಅದ್ರ ರೂಪು ರೇಷೆ ಹೆಂಗಿರವು ಹೇಳಿ ಒಂದ್‌ ಸಣ್‌ ಚರ್ಚೆನೂ ಆವತ್ತೇ ನಡ್ದೋತು.

ಕನ್ನಡದ ಉಪಭಾಷೆ ಆಗಿರ ಹವಿಗನ್ನಡ ಅಥ್ವಾ ಹವ್ಯಕ ಭಾಷೆ ಮಾತಾಡುಲೆ ರಾಶಿ ಚೆಂದ, ಕೇಳುಲೂ ಅಷ್ಟೇ ಹಿತ. ಆದ್ರೆ, ಈ ಭಾಷೆಲೂ ಬೇಕಾದಷ್ಟ್‌ ವೈವಿಧ್ಯ ಇದ್ದು. ದಕ್ಷಿಣ ದಿಕ್ಕು ಹಾಗೇ ಉತ್ತರ ದಿಕ್ಕಲ್ಲಿ ಚಾಲ್ತಿಲಿಪ್ಪು ಈ ಭಾಷೆಲಿ ಸಿಕ್ಕಾಪಟ್ಟೆ ದೊಡ್ಡ ವ್ಯತ್ಯಾಸನೇ ಇದ್ದು. ಅದ್ರಲ್ಲೂ ಸೀಮೆಯಿಂದ ಸೀಮೆಗೆ ಭಾಷೆ, ಪದ ಬಳಕೆ, ಮಾತಾಡು ಧಾಟಿಯಲ್ಲೂ ಸಣ್ಣ ಪುಟ್ಟ ವ್ಯತ್ಯಾಸ ಕಾಣ್ಲಕ್ಕು. ಹಿಂಗಾಗಿ ಎಲ್ಲಾ ನವ್ನಿ ಹವಿಗನ್ನಡ ಭಾಷೆಗೆ ಅವ್ಕಾಶ ಕೊಡ್ವಂಥ ವೆಬ್‌ಸೈಟ್‌ ಇದಾಗವು ಹೇಳುದು ಐದೂ ಜನ್ರ ಸರ್ವಸಮ್ಮತ ಅಭಿಪ್ರಾಯ. ಊರು, ಕೇರಿ, ಸೀಮೆ, ರಾಜ್ಯ ಅಷ್ಟೇ ಅಲ್ಲಗಿದ್ದೆ, ಹೊರ ರಾಜ್ಯ, ಹೊರದೇಶದಲ್ಲೂ ಇಪ್ಪು ಹವ್ಯಕ್ರನ್ನ ಬೆಸ್ಯು ಉದ್ದೇಶ ಇಟ್ಕಂಡು ಈ ವೆಬ್‌ಸೈಟಿಗೆ “ಹವ್ಯಕ ವಿಶ್ವ” ಹೇಳಿ ಹೆಸ್ರಿಡ್ವ ಹೇಳಿ ಆವತ್ತೇ ತೀರ್ಮಾನ ಮಾಡ್ಕಂಡ. ಕಡೆಗೆ, ಸುಮಾರ್‌ ಸಲ ಸಭೆ ಸೇರಿ ವೆಬ್‌ಸೈಟ್‌ನ ರೂಪುರೇಷೆ ಬಗ್ಗೆ ಚರ್ಚೆ ಮಾಡಿ ಕನಸಿಗೆ ಒಂದ್‌ ಸ್ಪಷ್ಟ ರೂಪ ಕೊಟ್ಟ. ಆರ್‌ ತಿಂಗ್ಳ ಹಿಂದೆ ಹಾಕ್ದ ಬೀಜ ಮೊಳ್ಕೆಯೊಡ್ದು ಈಗ ಸಸಿಯಾಗಿ ನಿಂತಿದ್ದು. ಹವ್ಯಕ ಭಾಷೆ, ಹವ್ಯಕ ಸಾಹಿತ್ಯ, ಹವ್ಯಕ ಸಮಾಜಕ್ಕಾಗಿ ಹವ್ಯಕರೇ ರೂಪಿಸಿದ ವೆಬ್‌ಸೈಟ್‌ ಇದು. ಭಾಷಾ ಭೇದ, ಪ್ರಾಂತ್ಯ ಭೇದ ಇಲ್ಲದ್ದೆ, ಹವ್ಯಕ ಭಾಷೆಲಿ ಸಾಹಿತ್ಯ ಕೃಷಿ ಮಾಡ್ವವ್ಕೆ ಪ್ರೋತ್ಸಾಹ ಕೊಡ, ಹವ್ಯಕರ ಆಚಾರ- ವಿಚಾರ, ಸಂಸ್ಕೃತಿ, ಆಹಾರ ಪದ್ಧತಿ, ಕೃಷಿ ವಿಧಾನಗಳ್ನ ಮುಂದಿನ ತಲೆಮಾರಿನವ್ಕೆ ತಿಳಿಸ ಹೇಳುದು ನಂಗ್ಳ ಉದ್ದೇಶ.

ಬೇರೆ ಬೇರೆ ಕ್ಷೇತ್ರದಲ್ಲಿ ಸಾಧ್ನೆ ಮಾಡ್ದ ಹವ್ಯಕ್ರ ಪರಿಚಯ ಮಾಡುದು, ಆಧುನಿಕ ತಂತ್ರಜ್ಞಾನ, ಶಿಕ್ಷಣ, ಷೇರುಪೇಟೆ, ವೈಯಕ್ತಿಯ ಬ್ಯಾಂಕಿಂಗ್‌ ಸೇರ್ದಂಗೆ ಈಗಿನ ಕಾಲ್ದಲ್ಲಿ ಹವ್ಯಕ ಸಮಾಜಕ್ಕೆ ಬೇಕಾದ ಎಲ್ಲಾ ಮಾಹಿತಿನೂ ನೀಡ ಅಂದ್ಕಂಡಿದ್ದ. ಹವ್ಯಕ ಯುವ ಸಮುದಾಯಕ್ಕೆ ಉದ್ಯೋಗ ಮಾಹಿತಿ ಕೊಡುದ್ರಿಂದ ಹಿಡ್ದು, ಉದ್ಯಮ ನಡ್ಸು ಹವ್ಯಕ್ರಿಗೆ ಪ್ರೋತ್ಸಾಹ ನೀಡು ಯೋಚನೆ, ಯೋಜನೆ ಇದ್ದು. ಒಟ್ನಲ್ಲಿ ಹವ್ಯಕ್ರಿಗೆ ಬೇಕಾದ ಎಲ್ಲಾ ನವ್ನಿ ವಿಷಯನ ಅಬ್ಬೆ ಭಾಷೆಲಿ ತಿಳಿಸುವ ಪ್ರಯತ್ನ ಇದು. ಅಂದ್ಹಾಗೆ, ವೈವಿಧ್ಯಮಯ ಹವ್ಯಕ ಭಾಷೆನ ಎಲ್ರಿಗೂ ಕಲ್ಸುವ ವಿಚಾರನೂ ಇದ್ದು. ಈ ಎಲ್ಲಾ ಕೆಲಸಗಳ್ನೂ ವೃತ್ತಿಪರವಾಗೇ ಮಾಡ ಹೇಳುದು ನಂಗ್ಳೆಲ್ಲರ ಆಶಯ. ಹಿಂಗಾಗಿ, ವೆಬ್‌ಸೈಟ್‌ ನಿರ್ವಹಿಸುಲೆ ಎಸ್‌ಆರ್‌ಕೆ ಮೀಡಿಯಾ ವಿಷನ್‌ ಹೇಳು ಕಂಪೆನಿನೇ ನೋದಾಯ್ಸಿದ್ದ.. ಅದ್ರ ಅಡಿಲಿ ಹವ್ಯಕ ವಿಶ್ವ.ಕಾಂ ಕಾರ್ಯ ನಿರ್ವಹಿಸ್ತು.

ವೆಬ್‌ಸೈಟ್‌ ಮುಖೇನ ಹವ್ಯಕ ಬರಹಗಾರರ/ಲೇಖಕರ ದೊಡ್ಡ ಸಮೂಹನೇ ಸೃಷ್ಟಿ ಮಾಡ ಹೇಳುದು ಹವ್ಯಕ ವಿಶ್ವದ ಅಭಿಲಾಷೆ. ಹವ್ಯಕ ಭಾಷೆಲಿ ಬರಿವವ್ಕೆ ಇಲ್ಲಿ ಮುಕ್ತ ಅವ್ಕಾಶ ಇದ್ದು. ವೆಬ್‌ಸೈಟ್‌ ಹೆಂಗ್‌ ಇರವು, ಯಾವ್ಯಾವ ಅಂಶಗಳ್ನ ಅದು ಒಳ್ಗೊಂಡಿರವು ಹೇಳುದ್ರ ಬಗ್ಗೆ ಅನೇಕ ಜನ ಸಲ್ಹೆ, ಸೂಚನೆ ಕೊಟ್ಟಿದ್ದ. ಅವೆಲ್ಲನೂ ಮುಕ್ತ ಮನ್ಸಿಂದ ಪರಿಗಣ್ಸಿ ಅಳವಡ್ಸ್‌ಕಂಡಿದ್ದ. ಮುಂದೆಯೂ, ಸಮಾಜದವ್ರ ಅಭಿಪ್ರಾಯಕ್ಕೆ ಮನ್ನಣೆ ಕೊಡ್ತ. ಹವ್ಯಕ ಭಾಷೆ, ಸಮಾಜಕ್‌ ಏನಾದ್ರೂ ಒಂದ್‌ ಕೊಡುಗೆ ನೀಡ ಹೇಳು ಆಶಯ್ದಲ್ಲಿ “ಹವ್ಯಕ ವಿಶ್ವ” ಮೊದಲ ಹೆಜ್ಜೆ. ಇನ್ನೂ ಕೆಲ್ವು ಯೋಜನೆ ಮನ್ಸಲ್ಲಿದ್ದು. ಹಂತ ಹಂತವಾಗಿ ಎಲ್ಲನೂ ತಿಳಿಸ್ತ.

ಸೂರ್ಯದೇವ ಪಥ ಬದ್ಲಾಯ್ಸುವ ಪರ್ವ ಕಾಲ್ದಲ್ಲಿ ಹೊಸದೊಂದು ಕ್ರಾಂತಿ ಮಾಡುಲ್‌ ಹೊರ್ಟಿದ್ದ. ನಿಂಗ್ಳೆಲ್ಲರ ಸಹಕಾರ್ದಿಂದ ಹವಿಗನ್ನಡ ಅಥ್ವಾ ಹವ್ಯಕ ಭಾಷೆ, ಸಾಹಿತ್ಯದಲ್ಲಿ “ಅಕ್ಷರ ಕ್ರಾಂತಿ” ಮಾಡ್ವ. ಸಮಾಜದ ಗುರು ಹಿರಿಯರ ಆಶೀರ್ವಾದ, ಕಿರಿಯರ ಸಹಕಾರ ಇದ್ರೆ, ಈ ಆಸೆ ಖಂಡಿತಾ ನೆರ್ವೇರ್ತು. ಸಂಕ್ರಮಣದ ಈ ಹೊತ್ತಲ್ಲಿ ಸಮಾಜದ ಎಲ್ರ ಪ್ರೋತ್ಸಾಹ, ಸಹಕಾರ ನಿರೀಕ್ಷಿಸ್ತಾ, “ಹವ್ಯಕ ವಿಶ್ವ”ನ ನಿಂಗ್ಳ ಮುಂದೆ ಇಡ್ತಾ ಇದ್ದ.

ಹರಸಿ, ಹಾರೈಸಿ. ಒಟ್ಟಾಗಿ ಅಬ್ಬೆ ಭಾಷೆನ, ಅದ್ರ ಸಾಹಿತ್ಯನ ಬೆಳೆಸಿ ಉಳಿಸುವ.

ಎಸ್‌ಆರ್‌ಕೆ ಮೀಡಿಯಾ ವಿಷನ್‌
ಹವ್ಯಕ ವಿಶ್ವ ಬಳಗ